Ad Widget .

ಕೆದಿಲ:ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ವತಿಯಿಂದ ಶ್ರಮದಾನದ ಮೂಲಕ ಮನೆಯ ಮಾಡು ದುರಸ್ತಿ

ಸಮಗ್ರ ನ್ಯೂಸ್: ಸುಳ್ಯದ ಮುಪ್ಪೇರ್ಯ ಗ್ರಾಮದ ಕೆದಿಲ ನಿವಾಸಿ ದಿ. ರಾಮಣ್ಣ ನಾಯ್ಕರ ಪತ್ನಿ ಗಂಗಮ್ಮ ಎಂಬವರ ಮನೆಯ ಮಾಡು ಸಂಪೂರ್ಣ ಶಿಥಿಲಗೊಂಡು ಮಳೆನೀರು‌ ಮನೆಯ ಒಳಗೆ ಬೀಳುತ್ತಿದ್ದನ್ನು ಗಮನಿಸಿ ಸ್ಥಳೀಯ ಬಾಳಿಲ ಗ್ರಾ.ಪಂ.‌ ಸದಸ್ಯ ಹರ್ಷ ಜೋಗಿಬೆಟ್ಟು ಅವರ ಸಲಹೆಯಂತೆ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯವರು ಶ್ರಮದಾನದ ಮೂಲಕ ಮನೆಯ ಮಾಡು ದುರಸ್ತಿ ಮಾಡಿ ಮಾನವೀಯತೆ ಮೆರೆದಿದ್ದಾರೆ.

Ad Widget . Ad Widget .

ಗಂಗಮ್ಮನವರು ಓರ್ವ ಅಂಗವಿಕ ಪುತ್ರಿಯೊಂದಿಗೆ ಕೆದಿಲದಲ್ಲಿ ವಾಸವಾಗಿದ್ದು, ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕಳೆದೆ 2 ವರ್ಷಗಳಿಂದ ಇವರ ಮನೆಯ ಮಾಡು ಅಲ್ಲಿಲ್ಲಿ ಸೋರುತ್ತಿದ್ದು, ವಾಸವಾಗಲು ಅಯೋಗ್ಯವಾಗಿತ್ತು. ಆದರೆ ಆರ್ಥಿಕ ಮುಗ್ಗಟ್ಟಿನಿಂದ ಇವರಿಗೆ ಮನೆಯನ್ನು ದುರಸ್ತಿ ಮಾಡಲು ಸಾಧ್ಯವಾಗಲಿಲ್ಲ. ಆಗ ಹರ್ಷರವರೇ ಮುಂದೆ ಬಂದು ಶೀಟ್ ಹಾಕಿ ತಾತ್ಕಾಲಿಕ ಪರಿಹಾರ ಮಾಡಿದ್ದರು. ಈ ವರ್ಷ ಮಳೆಗಾಲದಲ್ಲಿ ಮಾಡು ಸಂಪೂರ್ಣ ಕೆಟ್ಟು ಹೋಗಿ ಮಳೆ ನೀರು ಮನೆಯ ಒಳಗೆ ಬಿದ್ದು, ವಾಸ ಮಾಡಲು ಕಷ್ಟವಾಗುತ್ತಿತ್ತು. ಇದನ್ನು ಅರಿತ ಹರ್ಷ ಜೋಗಿಬೆಟ್ಟುರವರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪದಾಧಿಕಾರಿಗಳನ್ನು ಭೇಟಿ ಮಾಡಿ ಸಹಾಯ ಮಾಡುವಂತೆ ವಿನಂತಿಸಿಕೊಂಡ ಮೇರೆಗೆ ಪಂಚಾಯತ್ ನಿಂದ ಸ್ವಲ್ಪ ಅನುದಾನವನ್ನು ಒದಗಿಸಿ ಹೊಸ ಮಾಡು ನಿರ್ಮಿಸಿಕೊಟ್ಟಿದ್ದಾರೆ.

Ad Widget . Ad Widget .

ಇಂದು (ಜೂ.23) ಬೆಳಿಗ್ಗಿನಿಂದ ಸಂಜೆಯ ವರೆಗೆ ನಿರಂತರ 8 ಗಂಟೆ ಗಳ ಕಾಲ ಮಳೆಯನ್ನು ಲೆಕ್ಕಿಸದೆ ಶೌರ್ಯ ವಿಪತ್ತು ನಿರ್ವಹಣಾ ಘಟಕ ನಿಂತಿಕಲ್ಲು ಇದರ ಸದಸ್ಯ ದಿನೇಶ್, ನಾರಾಯಣ, ತೇಗಪ್ಪ, ರಮೇಶ್ ಕುರಿಯ, ಆನಂದ, ಅಂಗಾರ, ಬೆಳ್ಳಾರೆ ಶೌರ್ಯ ವಿಪತ್ತು ಘಟಕದ ಶೇಷಪ್ಪ ನಾಯ್ಕ್ ಮಠತ್ತಡ್ಕ, ಸುಂದರ ನಾಯ್ಕ್ ಮಠತ್ತಡ್ಕ, ರಮೇಶ್ ನಾಯ್ಕ್ ಮಠತ್ತಡ್ಕ ಶ್ರಮದಾನದ ಮೂಲಕ ಮನೆಯ ಮಾಡು ನಿರ್ಮಾಣ ಮಾಡಿದರು. ಮುಪ್ಪೇರ್ಯ ವಾರ್ಡ್ ಸದಸ್ಯ ಹರ್ಷ ಜೋಗಿಬೆಟ್ಟು, ಬೆಳ್ಳಾರೆ ವಲಯದ ಮೇಲ್ವಿಚಾರಕಿ ವಿಶಾಲಾ ಸಹಕರಿಸಿದರು. ಬಡಗಿ ಕೆಲಸವನ್ನು ಶಿವಪ್ಪ ಆಚಾರ್ಯ ಮತ್ತು ಸಂದೀಪ್ ನೆರವೇರಿಸಿದರು.

Leave a Comment

Your email address will not be published. Required fields are marked *