Ad Widget .

ಪುತ್ತೂರು: ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನದಂತ ಅಪ್ಪ ನನ್ನ ಅಪ್ಪವಿಶೇಷ ಅನುಭಂದ ಕಾರ್ಯಕ್ರಮ

ಸಮಗ್ರ ನ್ಯೂಸ್: ಮುಳಿಯ ಜ್ಯುವೆಲ್ಸ್ ನಲ್ಲಿ ವಿಶ್ವ ಅಪ್ಪಂದಿರ ದಿನದ ಅಂಗವಾಗಿ ಚಿನ್ನದಂತ ಅಪ್ಪ ನನ್ನ ಅಪ್ಪ ಎಂಬ ವಿಶೇಷ ಅನುಭಂದ ಕಾರ್ಯಕ್ರಮವನ್ನು ಪುತ್ತೂರಿನ ಶಾಖೆಯಲ್ಲಿ ಜೂ. 22 ರಂದು ನಡೆಸಲಾಯಿತು.

Ad Widget . Ad Widget .

ಕಾರ್ಯಕ್ರಮವನ್ನು ಮುಳಿಯ ಸಂಸ್ಥೆಯ ಹಿರಿಯರಾದ ಶ್ಯಾಮ್ ಭಟ್ ಉದ್ಘಾಟಿಸಿ ತಂದೆಯವರು ಸಂಸ್ಥೆ ನಡೆಸುವ ಸಮಯದಲ್ಲಿ ೯೧೬ ಚಿನ್ನಾಭರಣ ಎಂಬ ವ್ಯವಸ್ಥೆ ಇಲ್ಲದಿದ್ದರೂ, ಅವರ ಕಾಲದಲ್ಲಿ ನೀಡಿದ ಚಿನ್ನಾಭರಣಗಳು ಅದೇ ಗುಣಮಟ್ಟದಲ್ಲಿತ್ತು. ಆ ಪ್ಯೂರಿಟಿಯನ್ನು ಅಂದು ಗ್ರಾಹಕರಿಗೆ ನೀಡಿದ ಕಾರಣದಿಂದ ಇಂದಿಗೂ ಮುಳಿಯದ ಹೆಸರು ಉತ್ತಮವಾಗಿ ಉಳಿದುಕೊಂಡಿದೆ. ಸಂಸ್ಥೆಯ ಬೆಳವಣಿಗೆಯಲ್ಲೂ ಇದು ಮಹತ್ವದ ಪಾತ್ರವನ್ನು ವಹಿಸಿದೆ ಎಂದು ತಿಳಿಸಿದರು.

Ad Widget . Ad Widget .

ಒಳ್ಳೆ ವಿಚಾರಗಳನ್ನು ನಮ್ಮ ಸಂಸ್ಕೃತಿಗೆ ಅಳವಡಿಸಿಕೊಳ್ಳುವುದು ಹಿರಿಯರಿಂದ ನಡೆದು ಬಂದ ಸಂಪ್ರದಾಯವಾಗಿದೆ. ಈ ನಿಟ್ಟಿನಲ್ಲಿ ಮುಳಿಯದ ವತಿಯಿಂದ ಅಪ್ಪಂದಿರ ದಿನಕ್ಕೆ ವಿಶೇಷ ಸ್ಥಾನವನ್ನು ನೀಡಿ ಆಚರಣೆಗೆ ತರಲಾಗಿದೆ. ಐದು ಶೋರೂಂ ನಲ್ಲಿ ಸೇರಿದ ಜನರನ್ನು ನೋಡಿದರೆ ಮಹತ್ವವಿದೆ ಎಂಬುದು ತಿಳಿಯುತ್ತದೆ ಎಂದು ಮುಳಿಯ ಜ್ಯುವೆಲ್ಸ್ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹೇಳಿದರು.

ಕಾರ್ಯಕ್ರಮದಲ್ಲಿ ಸಿಲ್ವರ್ ಉತ್ಸವದ ಅಂಗವಾಗಿ ವಿವಿಧ ವಿನ್ಯಾಸದ ಆಭರಣಗಳನ್ನು ಬಿಡುಗಡೆ ಮಾಡಲಾಯಿತು. ಗ್ರಾಹಕರಾದ ರವಿ ಕುಮಾರ್ ಮಾತನಾಡಿ ಹಿರಿಯರ ಕಾಲದಿಂದಲೂ ಮುಳಿಯದ ಗ್ರಾಹಕರಾಗಿದ್ದು, ಚಿನ್ನ ಎಂದರೆ ಮುಳಿಯ ಎಂದು ಹೆಸರುವಾಸಿಯಾಗಿದೆ. ಮುಳಿಯ ಸಂಸ್ಥೆ ವ್ಯಾಪಾರಕ್ಕೆ ಮಾತ್ರ ಸೀಮಿತವಾಗಿರದೆ, ಗ್ರಾಹಕರ ಸಂತೃಪ್ತಿಗೂ ಹೆಚ್ಚಿನ ಮಹತ್ವ ನೀಡುತ್ತಿರುವುದು ಕಾರ್ಯಕ್ರಮಗಳ ಮೂಲಕ ತಿಳಿಯುತ್ತದೆ ಎಂದರು.

ಮುಳಿಯದ ವತಿಯಿಂದ ವಿಶೇಷ ರೀತಿಯ ಅನುಭಂದ ಕಾರ್ಯಕ್ರಮವಾಗಿದ್ದು, ವಿನೂತನ ಆಟಗಳು, ಪ್ರಶ್ನೋತ್ತರಗಳು, ಅಂತರಾತ್ಮದ ಮಾತುಗಳ ಕಾರ್ಯಕ್ರಮ ನಡೆಯಿತು. ಸಂಗೀತ ಮನೋರಂಜನೆಯನ್ನು ಗ್ರಾಹಕರಿಗೆ ನೀಡಲಾಯಿತು. ಗ್ರಾಹಕ ಇಸ್ಮಾಯಿಲ್ ನೆಲ್ಯಾಡಿ ಅಭಿಪ್ರಾಯಗಳನ್ನು ಹಂಚಿಕೊಂಡರು. ಸಂಸ್ಥೆಯ ನಿರ್ದೇಶಕಿ ಕೃಷ್ಣವೇಣಿ ಪ್ರಸಾದ್ ಮುಳಿಯ, ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್, ಮಾರುಕಟ್ಟೆ ಮುಖ್ಯಸ್ಥ ಸಂಜೀವ, ಪ್ಲೋರ್ ಮ್ಯಾನೇಜರ್ ಆನಂದ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು. ಪ್ಲೋರ್ ಮ್ಯಾನೇಜರ್ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಸೌರಭ ರಾವ್ ಸಹಕರಿಸಿದರು.

ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್, ಬೆಂಗಳೂರು ಶೋರೋಂ ನಲ್ಲಿ ಏಕಕಾಲದಲ್ಲಿ ‘ಚಿನ್ನದಂತ ಅಪ್ಪ ನನ್ನ ಅಪ್ಪ’ ವಿನೂತನ ಕಾರ್ಯಕ್ರಮ ನಡೆಯಿತು. ೨೦೦ಕ್ಕೂ ಅಧಿಕ ತಂದೆ ಮಗ, ಅಪ್ಪ ಮಗಳು ಜೋಡಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನರಂಜನಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರು.

Leave a Comment

Your email address will not be published. Required fields are marked *