Ad Widget .

ಎತ್ತಿನಭುಜ ಚಾರಣ ನಿರ್ಬಂಧಿಸಿ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ಚಾರಣ ಪ್ರಿಯರ ಮೆಚ್ಚಿನ ಸ್ಥಳ ಎತ್ತಿನಭುಜಕ್ಕೆ ಸದ್ಯ ಪ್ರವಾಸಿಗರು ಭೇಟಿ ನೀಡದಂತೆ ರಾಜ್ಯ ಸರ್ಕಾರ ಆದೇಶಿಸಿದೆ.

Ad Widget . Ad Widget .

ಪ್ರವಾಸೋದ್ಯಮದ ಅಡಿ ರಾಜ್ಯದ ವಿವಿಧೆಡೆ ಆನ್‌ಲೈನ್ ಟಿಕೆಟ್ ವ್ಯವಸ್ಥೆ ಮಾಡಿ ಪ್ರವಾಸಿಗರ ಸಂಖ್ಯೆಯನ್ನು ಸೀಮಿತಗೊಳಿಸುವವರೆಗೆ ಚಾರಣ ಪ್ರದೇಶಗಳಲ್ಲಿ ಪ್ರವೇಶ ನಿರ್ಬಂಧಿಸಿ ಈಗಾಗಲೇ ಸೂಚನೆ ನೀಡಲಾಗಿದೆ. ಆದರೂ ಜೂ. 15, 16, 17ರಂದು ರಜೆ ಇದ್ದ ಕಾರಣ ಮುಳ್ಳಯನಗಿರಿ, ಎತ್ತಿನಭುಜದಲ್ಲಿ ಸಾವಿರಾರು ಚಾರಣಿಗರು ಬಂದು ಹೋಗಿರುವುದಾಗಿ ವರದಿಗಳಾಗಿವೆ. ತಾತ್ಕಾಲಿಕವಾಗಿ ಚಾರಣ ನಿರ್ಬಂಧವಾಗಿದ್ದರೂ ಅವಕಾಶ ನೀಡಿರುವ ಬಗ್ಗೆ ಪರಿಶೀಲಿಸಿ, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದಾರೆ.

Ad Widget . Ad Widget .

ಮುಂದಿನ ಆದೇಶದವೆರೆಗೆ ಎತ್ತಿನಭುಜಕ್ಕೆ ಚಾರಣ ನಿರ್ಬಂಧಿಸಲಾಗಿದೆ ಎಂದು ಚಿಕ್ಕಮಗಳೂರು ಅರಣ್ಯ ಇಲಾಖೆಯು ಬ್ಯಾನರ್ ಅಳವಡಿಸಿ ಎಚ್ಚರಿಕೆ ನೀಡಿದೆ.

Leave a Comment

Your email address will not be published. Required fields are marked *