ಸಮಗ್ರ ನ್ಯೂಸ್: ರಾಜ್ಯದ ಮದ್ಯಪ್ರಿಯರಿಗೆ ಕರ್ನಾಟಕ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮದ್ಯಪ್ರಿಯರ ಕುರಿತು ಫೆಬ್ರವರಿಯಲ್ಲಿ ಬಜೆಟ್‌ನಲ್ಲಿ ಕೊಟ್ಟಿದ್ದ ಭರವಸೆಯನ್ನು ಉಳಿಸಿಕೊಳ್ಳುವುದಾಗಿ ತಿಳಿಸಿರುವ ರಾಜ್ಯ ಸರ್ಕಾರ, ಜುಲೈ 1ರಿಂದ ವಿವಿಧ ಮದ್ಯದ ಬೆಲೆ ಇಳಿಕೆ ಜಾರಿಗೆ ತರಲಿದೆ.
ಜುಲೈ 1ರಿಂದ ವಿವಿಧ ದುಬಾರಿ ಪ್ರಿಮಿಯಂ ಮದ್ಯದ ಅಬಕಾರಿ ತೆರಿಗೆಯನ್ನು ಕಡಿಮೆ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಇಂಧನ ಬೆಲೆ ಹಾಗೂ ದಿನಸಿ ವಸ್ತುಗಳು ಬೆಲೆ ಏರಿಕೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮದ್ಯದ ಬೆಲೆ ಇಳಿಸುವ ನಿರ್ಧಾರ ಕೆಲವರಿಗೆ ಅಚ್ಚರಿ ತರಿಸಿದೆ. ಎಲ್ಲ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ನಿರ್ಧಾರ ಕೈಗೊಳ್ಳಬೇಕಿತ್ತು ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.
ಯಾವೆಲ್ಲ ಮದ್ಯದ ಬೆಲೆ ಇಳಿಕೆ ಆಗಲಿದೆ, ಯಾವ ಬ್ರ್ಯಾಂಡ್ ಎಂಬ ಮಾಹಿತಿ ನೋಡುವುದಾದರೆ, ದುಬಾರಿ ಮದ್ಯದ ಸೆಮಿ ಪ್ರೀಮಿಯಂ ಮತ್ತು ಪ್ರೀಮಿಯಂ ಅಬಕಾರಿ ಬ್ರ್ಯಾಂಡ್ ಗಳ ಮದ್ಯದ ತೆರಿಗೆ ಇಳಿಕೆ ಆಗಲಿದೆ. ನೆರೆ ಹೊರೆಯ ರಾಜ್ಯಗಳಲ್ಲಿನ ಮದ್ಯದ ಬೆಲೆ ನೋಡಿಕೊಂಡು ಇಲ್ಲಿ ಪರಿಷ್ಕರಿಸಲು ಸರ್ಕಾರ ನಿರ್ಧರಿಸಿದೆ.
ಸತತವಾಗಿ ಬಿಯರ್ ಬೆಲೆ ಏರಿಕೆ ಆಗಿದ್ದರಿಂದ ಮದ್ಯಪ್ರಿಯರು, ಅದರಲ್ಲೂ ಬಿಯರ್‌ಪ್ರಿಯರು ಕಡಿಮೆ ಬೆಲೆಯ ಬಿಯರ್‌ನತ್ತ ಮುಖ ಮಾಡಿದ್ದರು. ಇದರಿಂದ 250 ರೂ. ದಾಟಿ ಬಿಯರ್ ಬಿಟ್ಟು, ಅಗ್ಗದ 120-140ರವರೆಗೆ ಬಿಯರ್ ಹೆಚ್ಚು ಮಾರಾಟವಾಗುತ್ತಿವೆ.