Ad Widget .

ಶಬರಿಮಲೆಯಲ್ಲಿ‌ ಗ್ರೀನ್‌ ಫೀಲ್ಡ್ ವಿಮಾನ ನಿಲ್ದಾಣ/ ಭೂ ಸ್ವಾಧೀನ ಅಧಿಸೂಚನೆ ಹಿಂಪಡೆದ ಕೇರಳ ಸರ್ಕಾರ

ಸಮಗ್ರ ನ್ಯೂಸ್: ಶಬರಿಮಲೆ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಯೋಜನೆಯ ಭೂಸ್ವಾಧೀನ ಕುರಿತು ಆಕ್ಷೇಪಗಳ ಹಿನ್ನೆಲೆಯಲ್ಲಿ ತನ್ನ ನಿಲುವು ಬದಲಿಸಿರುವ ಕೇರಳ ಸರ್ಕಾರ ಅಧಿಸೂಚನೆಯನ್ನು ಹಿಂದಕ್ಕೆ ಪಡೆಯುವುದಾಗಿ ಹೈಕೋರ್ಟ್‌ಗೆ ಹೇಳಿದೆ.

Ad Widget . Ad Widget .

ಪ್ರಸ್ತುತ ಅಧಿಸೂಚನೆಗೆ ಈ ಹಿಂದೆ ಹೈಕೋರ್ಟ್ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿಲುವನ್ನು ಬದಲಿಸಿದ್ದು, ಭೂ ಸ್ವಾಧೀನದಿಂದಾಗುವ ಸಾಮಾಜಿಕ ಪರಿಣಾಮದ ಅಧ್ಯಯನವನ್ನು ಹೊಸ ಏಜೆನ್ಸಿಯಿಂದ ನಡೆಸಲಾಗುವುದು ಎಂದು ಕೋರ್ಟ್‌ಗೆ ಹೇಳಿದೆ.

Ad Widget . Ad Widget .

ಕೇರಳ ಸರ್ಕಾರದ ಭೂ ಸ್ವಾಧೀನ ಅಧಿಸೂಚನೆಗೆ ಬಿಲೀವರ್ಸ್‌ ಚರ್ಚ್ ಅಧೀನದಲ್ಲಿರುವ ಅಯನಾ ಚಾರಿಟಬಲ್‌ ಟ್ರಸ್ಟ್‌ ಸಲ್ಲಿಸಿದ್ದ ಆಕ್ಷೇಪ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ ಈ ಅಧಿಸೂಚನೆಗೆ ತಡೆ ನೀಡಿತ್ತು.

Leave a Comment

Your email address will not be published. Required fields are marked *