Ad Widget .

ಯಕ್ಷಗಾನಕ್ಕೂ ಎಂಟ್ರಿಕೊಟ್ಟ ದರ್ಶನ್ – ಪವಿತ್ರಾಗೌಡ ಪ್ರಕರಣ| ವೈರಲ್ ಆಗ್ತಿದೆ ಸ್ವಾರಸ್ಯಕರ ವಿಡಿಯೋ

ಸಮಗ್ರ ನ್ಯೂಸ್: ನಟಿ ಪವಿತ್ರ ಗೌಡಅವರಿಗೆ ಅಶ್ಲೀಲ ಮೆಸೇಜ್‌ ಮಾಡಿದ್ದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌, ಪವಿತ್ರ ಗೌಡ ಸೇರಿದಂತೆ 10 ಜನರನ್ನು ಬಂಧಿಸಲಾಗಿದೆ. ಈ ಕೊಲೆ ಕೇಸ್‌ ಸದ್ಯ ಸಂಚಲನ ಸೃಷ್ಟಿಸಿದ್ದು, ಸುದ್ದಿ ಮಾಧ್ಯಮ, ಟ್ರೋಲ್‌ ಪೇಜ್‌, ಸೋಷಿಯಲ್‌ ಮೀಡಿಯಾಗಳಲ್ಲಿ ಈ ಕೊಲೆ ಪ್ರಕರಣ ಸುದ್ದಿಯದ್ದೇ ಚರ್ಚೆ ನಡೆಯುತ್ತಿದೆ. ಇದೀಗ ನಟ ದರ್ಶನ್‌ ಮತ್ತು ಪವಿತ್ರಾ ಮ್ಯಾಟರ್ ಯಕ್ಷಗಾನ ಪ್ರಸಂಗಕ್ಕೂ ಎಂಟ್ರಿ ಕೊಟ್ಟಿದ್ದು, ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ. ‌

Ad Widget . Ad Widget .

ಯಕ್ಷಗಾನ ಪ್ರಸಂಗದಲ್ಲಿ ಕೆಲಮೊಮ್ಮೆ ಪ್ರಸಕ್ತ ವಿದ್ಯಮಾನಗಳ ಕುರಿತ ಹಾಸ್ಯಮಯ ಸಂಭಾಷಣೆಗಳೂ ಕೂಡಾ ನಡೆಯುತ್ತವೆ. ಈ ಸನ್ನಿವೇಶಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತದೆ. ಇತ್ತೀಚಿಗಷ್ಟೇ ಯಕ್ಷಗಾನ ಪ್ರಸಂಗವೊಂದರಲ್ಲಿ ಪ್ರಜ್ವಲ್‌ ರೇವಣ್ಣ ಹೆಸರು ಕೂಡಾ ಪ್ರಸ್ತಾಪವಾಗಿತ್ತು. ಈ ವಿಡಿಯೋವಂತೂ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ತುಳು ಯಕ್ಷಗಾನ ಬಯಲಾಟವೊಂದರಲ್ಲಿ ರಂಗಸ್ಥಳದಲ್ಲಿ ಹಾಸ್ಯಕಲಾವಿದರ ನಡುವೆ ನಡೆದ ಸಂಭಾಷಣೆಯಲ್ಲಿ ದರ್ಶನ್‌ ಮತ್ತು ಪವಿತ್ರಾ ಹೆಸರು ಪ್ರಸ್ತಾಪವಾಗಿದೆ. ಈ ವಿಡಿಯೋ ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Ad Widget . Ad Widget .

ಈ ವಿಡಿಯೋವನ್ನು ಸ್ವಸ್ತಿಕ್‌ ಕನ್ಯಾಡಿ (swasthik_kanyadi) ಎಂಬವರು ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಯಕ್ಷಗಾನದಲ್ಲಿ ದರ್ಶನ್-ಪವಿತ್ರ ಮ್ಯಾಟರ್‌” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ಯಕ್ಷಗಾನ ಬಯಲಾಟದಲ್ಲಿ ಹಾಸ್ಯಕಲಾವಿದರು ದರ್ಶನ್‌ ಮತ್ತು ಪವಿತ್ರ ಹೆಸರನ್ನು ಪ್ರಸ್ತಾಪಿಸಿದ ದೃಶ್ಯವನ್ನು ಕಾಣಬಹುದು. ಅದರಲ್ಲಿ ಒಬ್ಬ ಕಲಾವಿದ ಶನಿವಾರ ದರ್ಶನ್‌ ಬೇಕೇ ಬೇಕು ಎಂದು ಹೇಳುತ್ತಾರೆ. ಆ ಸಂದರ್ಭದಲ್ಲಿ ದರ್ಶನ್‌ ಬೇಡ, ದರ್ಶನದ ವ್ಯವಸ್ಥೆ ಮಾಡಿದ್ರೆ ನಾವು ಕೂಡಾ ಒಳಗೆ ಇರ್ಬೇಕಾಗುತ್ತದೆ. ದರ್ಶನವೂ ಬೇಡ ಪವಿತ್ರವೂ ಬೇಡ ಎಂದು ಹೇಳುವ ಹಾಸ್ಯಮಯ ದೃಶ್ಯವನ್ನು ಕಾಣಬಹುದು.

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 11 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಹಾಸ್ಯಮಯ ದೃಶ್ಯ ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದೆ.

Leave a Comment

Your email address will not be published. Required fields are marked *