ಸುಳ್ಯ: ಕಾರಿನಲ್ಲಿ ಹಿಂದೂ ಹುಡುಗಿ ಜೊತೆ‌ ಮುಸ್ಲಿಂ ಯುವಕ| ಪೊಲೀಸ್ ವಿಚಾರಣೆ ವೇಳೆ ಬಯಲಾಯ್ತು ಅಸಲಿ ಸತ್ಯ!!

ಸಮಗ್ರ ನ್ಯೂಸ್: ಕೇರಳ ಮೂಲದ ಅನ್ಯಕೋಮಿನ ಜೋಡಿಯೊಂದು ಸುಳ್ಯ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಿರುವ ವೇಳೆ ಹಿಂದೂ ಕಾರ್ಯಕರ್ತರು ಸುಳ್ಯದಲ್ಲಿ ತಡೆದು ನಿಲ್ಲಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಜೂ. 18 ರಂದು ಸಂಜೆ ನಡೆದಿದೆ.

Ad Widget ... ..

ಕೇರಳ ಮೂಲದ ಹಿಂದೂ ಹುಡುಗಿಯೊಬ್ಬಳು ಮನೆಯಲ್ಲಿ ಪೋಷಕರ ಜೊತೆ ಜಗಳವಾಡಿಕೊಂಡು ಅನ್ಯಕೋಮಿನ ಯುವಕನೊಂದಿಗೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬೆಂಗಳೂರಿನತ್ತ ತೆರಳುತ್ತಿದ್ದಳು ಎಂದು ಭಾವಿಸಿ ಹಿಂದೂ ಕಾರ್ಯಕರ್ತರು ಸುಳ್ಯದಲ್ಲಿ ‌ತಡೆದು ಆ ಜೋಡಿಯನ್ನು ಪೊಲೀಸರಿಗೆ ಒಪ್ಪಿಸಿದರು.

Ad Widget

ಪೊಲೀಸ್ ವಿಚಾರಣೆ ವೇಳೆ ಆ ಜೋಡಿ ಈ ಹಿಂದೆಯೇ ಮದುವೆಯಾಗಿದ್ದಾರೆಂದೂ, ಅಲ್ಲದೇ ಅದಕ್ಕೆ ಪೂರಕ ದಾಖಲೆಗಳನ್ನು ತೋರಿಸಿರುವುದಾಗಿಯೂ ತಿಳಿದುಬಂದಿದೆ. ಎರಡು ವರ್ಷಗಳ ಹಿಂದೆಯೇ ಹಿಂದೂ ಯುವತಿ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದು, ಬೆಂಗಳೂರಿಗೆ ತೆರಳುತ್ತಿದ್ದು, ವಿಚಾರಣೆ ಬಳಿಕ ಸಂಪಾಜೆವರೆಗೆ ಪೊಲೀಸ್ ರಕ್ಷಣೆ ಜೊತೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *