Ad Widget .

ಉಡುಪಿಯಲ್ಲಿ ಮತ್ತೊಂದು ಗ್ಯಾಂಗ್ ವಾರ್: ಭಯಭೀತರಾದ ಜನ

ಸಮಗ್ರ ನ್ಯೂಸ್: ಉಡುಪಿಯಲ್ಲಿ ಮೊನ್ನೆಯಷ್ಟೇ ಒಂದು ಗ್ಯಾಂಗ್ ವಾರ್ ನಡೆದಿತ್ತು, ಇದಾದ ಬಳಿಕ ಈಗ ಮತ್ತೊಂದು ಇದೇ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಜೂನ್ 15ರ ರಾತ್ರಿ ನಡೆದಿದೆ. ಪುತ್ತೂರಿನ ಸೆಲೂನ್ ನೌಕರ ಚರಣ್, ಶಬರಿ ಎಂಬಾತನಿಗೆ ಬೈದಿದ್ದನು. ಈ ವಿಚಾರ ತಿಳಿದ ಪ್ರವೀಣ್ ಮತ್ತು ಈತನ ಗ್ಯಾಂಗ್ ಮಾತುಕತೆಗೆಂದು ಚರಣ್ ನನ್ನು ಉಡುಪಿ ನಗರದ ಪುತ್ತೂರಿ‌ನ ಬಿರಿಯಾನಿ ಪಾಯಿಂಟ್‌ ಬಳಿ ಬರಲು ತಿಳಿಸಿದರು.

Ad Widget . Ad Widget .

ಚರಣ್ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಆಗಮಿಸಿದ್ದನು. ಪ್ರವೀಣ್ ಆ್ಯಂಡ್ ಟೀಂ ತಲವಾರು ಬೀಸಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಚರಣ್ ಮತ್ತು ಸಂಗಡಿಗರು ಬೈಕ್, ಸ್ಕೂಟರ್ ಬಿಟ್ಟು ಓಡಿದ್ದಾರೆ. ಚರಣ್ ಸಿಗದಿದ್ದಕ್ಕೆ ಪ್ರವೀಣ್ ಮತ್ತು ಆತನ ಟೀಂ ಆತನ ಬೈಕ್ ಮೇಲೆ ತಲವಾರಿನಿಂದ ಹಾನಿ ಮಾಡಿದ್ದಾರೆ. ಪುಂಡರು ತಾವು ಕೃತ್ಯವೆಸಗಿರುವ ದೃಶ್ಯವನ್ನು ವೀಡಿಯೋ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *