ಸಮಗ್ರ ನ್ಯೂಸ್: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹಾಸ್ಯ ನಟ ಚಿಕ್ಕಣ್ಣನಿಗೆ ಪ್ರಕರಣ ಸಂಬಂಧ ನೋಟಿಸ್ ನೀಡಲು ಮುಂದಾಗಿದ್ದು,ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ.
ಕೊಲೆಗೂ ಮುನ್ನ ನಟ ಚಿಕ್ಕಣ್ಣ ದರ್ಶನ್ ಜೊತೆಗೆ ಬಾರ್ವೊಂದರಲ್ಲಿ ಪಾರ್ಟಿ ಮಾಡಿದ್ದರು ಎನ್ನಲಾಗದೆ. ಈ ನಡುವೆ ಪಾರ್ಟಿಯಲ್ಲಿ ನಿರ್ಮಾಪಕರೊಬ್ಬರು ಕೂಡ ಇದ್ದರು ಎನ್ನಲಾಗಿದೆ. ಸದ್ಯ ಚಿಕ್ಕಣ್ಣ ಮತ್ತು ನಿರ್ಮಾಪಕರಿಗೆ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ. ನಾಳೆ ವಿಚಾರಣೆಗೆ ಬರುವಂತೆ ಸೂಚನೆ ನೀಡಬಹುದು ಎನ್ನಲಾಗಿದೆ.