ಸಮಗ್ರ ನ್ಯೂಸ್: ನಮ್ಮ ಮೆಟ್ರೊದಲ್ಲಿನ ನೇರಳೆ ಮಾರ್ಗದ ಚಲ್ಲಘಟ್ಟ ನಿಲ್ದಾಣದಿಂದ ಕೆಂಗೇರಿವರೆಗಿನ ಮಾರ್ಗದಲ್ಲಿ ಸೋಮವಾರ 5 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮೆಟ್ರೋ ರೈಲುಗಳು ಸಂಚರಿಸುವುದಿಲ್ಲ. ಈ ಮಾರ್ಗದ ರೈಲುಗಳನ್ನು ಅವಲಂಬಿಸಿರುವ ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಂಡರೆ ಉತ್ತಮ ಈ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದ್ದು ದುರಸ್ತಿಗಾಗಿ ನಮ್ಮ ಮೆಟ್ರೊ ರೈಲು ಪ್ರಾಧಿಕಾರ ಸೇವೆಯನ್ನು ನಿಲ್ಲಿಸುವುದಾಗಿ ಬಿಎಂಆರ್ ಸಿಎಲ್ ಮಾಹಿತಿ ಹೊರಡಿಸಿದೆ.
ನಮ್ಮ ಮೆಟ್ರೋ ನೀಡಿರುವ ಪ್ರಕಟಣೆ:
ನೇರಳೆ ಮಾರ್ಗದಲ್ಲಿರುವ ಚಲ್ಲಘಟ್ಟ ಮೆಟ್ರೋ ನಿಲ್ದಾಣದಲ್ಲಿ ದಿನಾಂಕ 17ನೇ ಜೂನ್ 2024 (ಸೋಮವಾರ) ರಂದು ನಿರ್ವಹಣೆ ಕೆಲಸ ನಡೆಯಲಿದೆ. ಹೀಗಾಗಿ ಕೆಂಗೇರಿ ಮತ್ತು ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆಗಳು ಬೆಳಗ್ಗೆ 5 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಲಭ್ಯ ಲಭ್ಯವಿರುವುದಿಲ್ಲ. ರೈಲು ಸೇವೆಗಳು ಮಧ್ಯಾಹ್ನ 1 ಗಂಟೆಯ ನಂತರ ವೇಳಾಪಟ್ಟಿಯ ಪ್ರಕಾರ ಚಲ್ಲಘಟ್ಟ ಮತ್ತು ವೈಟ್ ಫೀಲ್ಡ್ ನಡುವಿನ ಸಂಪೂರ್ಣ ನೇರಳೆ ಮಾರ್ಗದಲ್ಲಿ ಲಭ್ಯವಿರುತ್ತವೆ. ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಸೇವೆಗಳು ಎಂದಿನಂತೆ ವೇಳಾಪಟ್ಟಿಯ ಪ್ರಕಾರ ಚಲಿಸುತ್ತವೆ. ಪ್ರಯಾಣಿಕರ ಅನಾನುಕೂಲಕ್ಕೆ ವಿಷಾದಿಸುತ್ತೇವೆ ಎಂದಿದೆ.
ಆದರೆ ಹಸಿರು ಮಾರ್ಗದಲ್ಲಿ ಮೆಟ್ರೋ ರೈಲು ಸೇವೆಗಳು ಎಂದಿನಂತೆ ಇರಲಿದೆ. ಇತ್ತೀಚೆಗೆ ನಮ್ಮ ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಹಾಗಾಗಿ ಕೆಲವು ಘಂಟೆಗಳ ಕಾಲ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ತಾಂತ್ರಿಕ ದೋಷ ಕಂಡಬಂದ ಹಿನ್ನಲೆ ಬೆಳಗ್ಗೆ 9.58ಕ್ಕೆ ರೈಲು ಸೇವೇಯಲ್ಲಿ ವ್ಯತ್ಯಯ ಉಂಟಾಗಿ ಪ್ರಯಾಣಿಕರು ಪರದಾಡಿದ್ದರು.