Ad Widget .

ಕೊನೆಗೂ ಕೊಲೆಯ‌ ರಹಸ್ಯ ಬಾಯ್ಬಿಟ್ಟ ದರ್ಶನ್, ಪವಿತ್ರಾ| ತನಿಖೆಯಲ್ಲಿ ತಿಳಿದುಬಂದ ಸತ್ಯಗಳೇನು?

ಸಮಗ್ರ ನ್ಯೂಸ್: ಕೊಲೆ ಪ್ರಕರಣದ ಕುರಿತು ನಟ ದರ್ಶನ್ ವಿಚಾರಣೆ ವೇಳೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಾನು ಕೊಲೆ ಮಾಡಿಲ್ಲ. ನನಗೇನು ಗೊತ್ತಿಲ್ಲ ಅಂತ ಮೊದಲ ದಿನದ ವಿಚಾರಣೆ ವೇಳೆ ಹೇಳಿದ್ದ ದರ್ಶನ್, ಇದೀಗ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ.

Ad Widget . Ad Widget .

ರೇಣುಕಾಸ್ವಾಮಿ ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಹಾಗೂ ಫೋಟೋಗಳನ್ನು ಕಳುಹಿಸಿದ್ದ. ಈ ವಿಚಾರವನ್ನು ನನಗೆ ಪವಿತ್ರಾಗೌಡ ನನಗೆ ಹೇಳಿಲ್ಲ. ಪವಿತ್ರಾ ಆಪ್ತ ಪವನ್ ನನಗೆ ರೇಣುಕಾಸ್ವಾಮಿ ಕಳುಹಿಸಿದ್ದ ಸಂದೇಶದ ಕುರಿತು ತಿಳಿಸಿದ್ದ. ಆ ಕ್ಷಣದಲ್ಲಿ ಭಾರೀ ಕೋಪ ಬಂತು. ಹೀಗಾಗಿ ಆತ ಯಾರು ಪತ್ತೆ ಹಚ್ಚಿ ಎಂದು ನಾನು ಪವನ್​ಗೆ ಹೇಳಿದೆ. ಆಗ ಪವನ್ ಮಾಹಿತಿ ಕಲೆಹಾಕಿ, ಮೆಸೇಜ್ ಕಳುಹಿಸಿದ್ದು ರೇಣುಕಾಸ್ವಾಮಿ ಎಂದು ಹೇಳಿದ.

Ad Widget . Ad Widget .

ಆತನನ್ನು ಚಿತ್ರದುರ್ಗದಿಂದ ಕರೆದುಕೊಂಡು ಬನ್ನಿ ಎಂದು ಪವನ್​ಗೆ ಹೇಳಿದೆ ಅಂತ ದರ್ಶನ್ ಹೇಳಿದ್ದಾರೆ.
ಚಿತ್ರದುರ್ಗದಿಂದ ಕರೆದುಕೊಂಡು ಬಂದು ಪಟ್ಟಣಗೆರೆ ಶೆಡ್​ನಲ್ಲಿ ಇರಿಸುವಂತೆ ಪವನ್​ಗೆ ತಿಳಿಸಿದ್ದೆ. ಅದೇ ಪ್ರಕಾರವಾಗಿ ಸ್ವಾಮಿಯನ್ನು ಶೆಡ್​ನಲ್ಲಿ ಇರಿಸಿದ್ದರು. ನಮ್ಮ ಹುಡುಗರು ಫೋನ್ ಮಾಡಿ ಶೆಡ್​ಗೆ ಬರುವಂತೆ ಹೇಳಿದ್ರು. ನಾನು ಪವಿತ್ರಾಗೌಡಳನ್ನು ಕರೆದುಕೊಂಡು ಶೆಡ್​ ಹೋದೆ. ಶೆಡ್​ಗೆ ಹೋದ ನಂತರ ಮೆಸೇಜ್ ಕಳುಹಿಸಿದ್ದು ಇವ್ನೇನಾ? ಎಂದು ಪವಿತ್ರಾಗೆ ಕೇಳಿದೆ.

ಹೌದು ಮಸೇಜ್ ಕಳುಹಿಸಿದ್ದು ಇತನೇ ಎಂದು ಪವಿತ್ರಾ ಹೇಳಿದ್ಳು. ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡಿ ಎಂದು ಹೇಳಿದೆ. ಆಕೆ ಸ್ವಾಮಿ ಚಪ್ಪಲಿಯಿಂದ ಹೊಡೆದ್ಳು. ನಾನು ಕೋಪದಲ್ಲಿ ಒಂದೆರೆಡು ಬಾರಿ ಸ್ವಾಮಿ ಹೊಡೆದೆ. ಆದಾದನಂತರ ಸ್ವಾಮಿಗೆ ಹಣ ಕೊಟ್ಟು, ನಂತರ ಇನ್ಮುಂದೆ ಮೆಸೇಜ್ ಮಾಡಬೇಡ ಎಂದು ಹೇಳಿದೆ. ನನ್ನ ಜೊತೆ ಪವಿತ್ರಾಗೌಡ ಕೂಡ ಬಂದಳು. ನಾನು ಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿಲ್ಲ. ನಾನು ಆತನ ಮೇಲೆ ತೀವ್ರವಾಗಿ ಹಲ್ಲೆ ಮಾಡಿಲ್ಲ. ಒಂದೆರೆಡು ಏಟಿ ಹೊಡೆದು, ಬುದ್ದಿಮಾತು ಹೇಳಿಬಂದೆ ಅಷ್ಟೇ ಎಂದು ಪೊಲೀಸರ ವಿಚಾರಣೆ ವೇಳೆ ದರ್ಶನ್ ಹೇಳಿದ್ದಾರೆ.

ಇನ್ನೂ ವಿಚಾರಣೆ ವೇಳೆ ದರ್ಶನ್, ಏನೇ ಕೇಳಿದರೂ ನಾನವನಲ್ಲ, ನನಗೇನೂ ಗೊತ್ತಿಲ್ಲ ಎಂದು ಉತ್ತರ ನೀಡ್ತಿದ್ದಾರಂತೆ. ಆದರೆ ಪ್ರಕರಣದಲ್ಲಿ ದರ್ಶನ್ ವಿರುದ್ಧದ ಸಾಕ್ಷಿಗಳು ಬಲವಾಗಿವೆ. ಕಾಲ್ ಡಿಟೇಲ್ಸ್​ನಿಂದ ಹಿಡಿದು ಎಲ್ಲವೂ ಬಲವಾದ ಸಾಕ್ಷಿಗಳು ಪೊಲೀಸರಿಗೆ ಸಿಕ್ಕಿವೆ ಎನ್ನಲಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ತನಿಖೆ ವೇಳೆ ಅತ್ಯಂತ ಆಘಾತಕಾರಿ ಅಂಶಗಳು ಬಯಲಾಗಿವೆ. ತನಿಖೆಯಲ್ಲಿ ಕೊಲೆಯ ಸಾಕ್ಷಿಗಳು ಸಿಕ್ಕಿರುವಾಗಲೇ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋವೊಂದು ವೈರಲ್ ಆಗಿದೆ.

ದರ್ಶನ್ ಮತ್ತು ಟೀಂ ರೇಣುಕಾಸ್ವಾಮಿಗೆ ಸಿಕ್ಕಾಪಟ್ಟೆ ಟಾರ್ಚರ್ ಕೊಟ್ಟಿದ್ದಾರೆ. ರಾಡ್​ನಿಂದ ಹೊಡೆದಿದ್ದಾರೆ. ಬೌನ್ಸರ್​ಗಳು ಹೊಡೆಯೋ ಏಟು ತಡೆಯೋಕೆ ಆಗುತ್ತಾ? ಆ ಚಿಕ್ಕ ಹುಡುಗ. ಏನೋ ಕುಡಿದು ಬಂದು ಏನೋ ಮಾಡಿರೋದಲ್ಲ. ಕೋಳಿಯನ್ನ ಗೋಡೆಗೆ ಎಸೆದು ಬಿಡುವ ಆಗೇ ಎಸೆದಿದ್ದಾರೆ. ಸುಮ್ಮನೆ ವಾರ್ನ್ ಮಾಡಿಬಿಟ್ಟಿದ್ರೆ, ಒಂದು ಸ್ಟೇಷನ್‌ಗೆ ಕಂಪ್ಲೆಂಟ್ ಕೊಟ್ಟಿದ್ರೆ ಆಗುತ್ತಾ ಇತ್ತು. ಪೊಲೀಸ್ರು ಕರೆದು ವಾರ್ನ್ ಮಾಡಿರುತ್ತಾ ಇದ್ದರು. ಕೊಲೆ ಆರೋಪಿಗಳಿಗೆ ಜಾಮೀನು ಸಿಗೋದು ತುಂಬಾ ಕಷ್ಟ. ಈ ಕೇಸ್‌ ಅನ್ನು ಒಂದು ವರ್ಷ ಎಳೆದುಕೊಂಡು ಹೋಗ್ತಾರೆ. 3 ತಿಂಗಳಲ್ಲ 6 ತಿಂಗಳಾದ್ರೂ ಜೈಲಿನಿಂದ ದರ್ಶನ್‌ ಹೊರಗೆ ಬರಲ್ಲ. ಹೈಕೋರ್ಟ್ ಅಲ್ಲ ಸುಪ್ರಿಂಕೋರ್ಟ್‌ಗೆ ಹೋದ್ರೂ ಜಾಮೀನು ಸಿಗಲ್ಲ ಎಂದು ಆಡಿಯೋದಲ್ಲಿ ಅಧಿಕಾರಿಯೊಬ್ಬರು ಮಾತನಾಡಿದ್ದಾರೆ.

Leave a Comment

Your email address will not be published. Required fields are marked *