Ad Widget .

ದರ್ಶನ್ ಚಿತ್ರರಂಗದಿಂದ ಬ್ಯಾನ್ ವಿಚಾರ| ಫಿಲ್ಮ್ ಚೇಂಬರ್ ನಿಂದ ಪ್ರತಿಕ್ರಿಯೆ

ಸಮಗ್ರ ನ್ಯೂಸ್: ದರ್ಶನ್ & ಸಹಚರರಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ದರ್ಶನ್, ಪವಿತ್ರಾ ಗೌಡ ಹಾಗೂ ಅವರ ಸಹಚರರನ್ನೂ ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಈ ಕೊಲೆ ಆರೋಪದಿಂದ ದರ್ಶನ್ ಅವರನ್ನು ಚಿತ್ರರಂಗದಲ್ಲಿ ಬ್ಯಾನ್ ಮಾಡಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ. ಇದರ ಕುರಿತು ನಿನ್ನೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.

Ad Widget . Ad Widget .

ಈ ವೇಳೆ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ಎಂ ಸುರೇಶ್ ಮಾತನಾಡಿ ‘ಯಾವ ಚಿತ್ರರಂಗದಲ್ಲೂ ನಟ-ನಟಿಯರನ್ನು ತಕ್ಷಣಕ್ಕೆ ಬ್ಯಾನ್ ಮಾಡಿಲ್ಲ. ಹಲವು ಸಭೆ ನಡೆದ ಬಳಿಕ ತೀರ್ಮಾನ ತೆಗೆದುಕೊಂಡಿದ್ದರು. ನಮ್ಮಲ್ಲಿ ದರ್ಶನ್ ಬಂಧನವಾಗಿ ಮೂರು ದಿನ ಆಗಿದೆ ಅಷ್ಟೇ. ನಮಗೂ ಸಮಯಾವಕಾಶ ಬೇಕು. ಈ ವಿಚಾರದಲ್ಲಿ ಸಂಧಾನ ಆಗಲ್ಲ. ದರ್ಶನ್ ಜೊತೆ ಯಾವ ಸಿನಿಮಾಗಳು ಅನೌನ್ಸ್ ಆಗಿವೆ ಹಾಗೂ ಯಾವ ಶೂಟಿಂಗ್ ನಡೆಯುತ್ತಿದೆ ಎಂಬುದನ್ನು ನೋಡಬೇಕು. ಈ ಹಿಂದೆ ನಾವು ಎಷ್ಟೋ ಕೇಸ್ ಗಳಲ್ಲಿ ಸಂಧಾನ ಮಾಡಿಸಿದ್ದೇವೆ. ಆದರೆ ಇದು ಕೊಲೆ ಕೇಸ್ ಆದ್ದರಿಂದ ಸೂಕ್ಷ ವಿಚಾರ. ಎಲ್ಲವೂ ಕಾನೂನಿನ ಅಡಿಯಲ್ಲೇ ಆಗಬೇಕು. ನಾವು ಪಾರದರ್ಶಕತೆಯಿಂದ ಕೆಲಸ ಮಾಡುತ್ತೇವೆ’ ಎಂದು ಎನ್.ಎಂ ಸುರೇಶ್ ಹೇಳಿದ್ದಾರೆ.

Ad Widget . Ad Widget .

ಅಷ್ಟೇ ಅಲ್ಲದೆ ಇಂದು ಚಿತ್ರದುರ್ಗದ ರೇಣುಕಾಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ ಫಿಲ್ಮ್ ಚೇಂಬರ್ ತಂಡ. ದರ್ಶನ್ ಮುಖ್ಯವಲ್ಲ, ಸಹನಾ ಕುಟುಂಬ ಮುಖ್ಯ. ಅಭಿಮಾನ ಪ್ರಾಣಕ್ಕಿಂತ ದೊಡ್ಡದಲ್ಲ. ದರ್ಶನ್ ತಪ್ಪು ಮಾಡಿದರೆ ಶಿಕ್ಷೆ ಆಗಲೇಬೇಕು.. ಎಲ್ಲಾ ದರ್ಶನ್ ಅಭಿಮಾನಿಗಳಿಗೆ ಇದು ಎಚ್ಚರಿಕೆಯಾಗಿದ್ದು, ಸಾಮಾಜಿಕ ಜಾಲತಾಣವನ್ನು ಸರಿಯಾಗಿ ಬಳಸಿ ಎಂದು ಸುರೇಶ್ ಸಲಹೆ ನೀಡಿದ್ದಾರೆ.

Leave a Comment

Your email address will not be published. Required fields are marked *