Ad Widget .

ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು..!

ಸಮಗ್ರ ನ್ಯೂಸ್: ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಬೆಂಗಳೂರು ಮೂಲದ ವಿಶಾಲ್(19)‌ ಹಾಗೂ ತಮಿಳುನಾಡು ಮೂಲದ ರೋಹನ್ (18) ಮೃತ ಯುವಕರು.

Ad Widget . Ad Widget .

ಈ ಯುವಕರು ಮೈಸೂರಿನ ಅಜ್ಜಿ ಮನೆಗೆ ಪೋಷಕರೊಂದಿಗೆ ಬಂದಿದ್ದರು‌. ಶ್ರೀರಂಗಪಟ್ಟಣದ ನಿಮಿಷಾಂಭ ದೇವಿ ದರ್ಶನಕ್ಕಾಗಿ ಕುಟುಂಬ ಸಮೇತ ಬಂದಿದ್ದರು. ಇದೇ ಸಂದರ್ಭದಲ್ಲಿ ಯುವಕರಿಬ್ಬರು
ಈಜಲು ಕಾವೇರಿ ನದಿಗಿಳಿದಿದ್ದರು. ಆದರೆ ಇವರಿಬ್ಬರಿಗೂ ಈಜು ಬಾರದೇ ಸಾವನ್ನಪ್ಪಿದ್ದಾರೆ.

Ad Widget . Ad Widget .

ಇನ್ನು ಮಗನನ್ನ ಕಳೆದುಕೊಂಡ ತಾಯಿ ರೋಧನೆ ಮುಗಿಲು ಮುಟ್ಟಿದ್ದು, ಕಾವೇರಿ ನದಿಗಿಳಿದು ಮಕ್ಕಳಿಗಾಗಿ ತಾಯಿ ಕೂಡ ಹುಡುಕಾಟ ನಡೆಸಿದ್ದರು. ‘ನನಗೆ ನನ್ನ ಮಗ ಬೇಕು ಎಂದು ಕಣ್ಣೀರಾಕಿ ಹುಡುಕಾಟ ಮಾಡುತ್ತಿದ್ದಂತೆ ಸ್ಥಳೀಯರು ಸೇರಿಕೊಂಡು ನದಿಯಿಂದ ತಾಯಿಯನ್ನ ಹೊರತಂದಿದ್ದಾರೆ. ಬಳಿಕ ಮೃತರ ಶವ ಮೇಲೆತ್ತಿದ್ದು, ಘಟನೆ ಕುರಿತು ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Comment

Your email address will not be published. Required fields are marked *