Ad Widget .

ಟೋಲ್ ಸಿಬ್ಬಂದಿ ಹಣ ಕೇಳಿದ್ದಕ್ಕೆ ಟೋಲ್ ಬೂತನ್ನೇ ನೆಲಸಮ ಮಾಡಿದ ಜೆಸಿಬಿ ಚಾಲಕ

ಸಮಗ್ರ ನ್ಯೂಸ್: ದೆಹಲಿ-ಲಕ್ನೋ ಹೆದ್ದಾರಿ ಎನ್ಎಚ್-9 ಪಿಲ್ಖುವಾ ಪೊಲೀಸ್ ಠಾಣಾ ವ್ಯಾಪ್ತಿಯ ಛಿಜರಾಸಿ ಟೋಲ್ ಪ್ಲಾಜಾ ಹಾದು ಹೋಗುತ್ತಿದ್ದ ಜೆಸಿಬಿ ಡ್ರೈವರ್ ಬಳಿ ಹಣ ಕೇಳಿದ್ದು ಆತ ಜಗಳಕ್ಕಿಳಿದಿದ್ದಾನೆ. ಬಳಿಕ ಬುಲ್ಡೋಸರ್ನಿಂದ ಟೋಲ್ ಪ್ಲಾಜಾವನ್ನು ನೆಲಸಮಗೊಳಿಸಿದ್ದಾನೆ.

Ad Widget . Ad Widget .

ಟೋಲ್ ಸಿಬ್ಬಂದಿ ಎಲ್ಲವನ್ನೂ ವಿಡಿಯೋ ಮಾಡಿದ್ದಾರೆ, ಆತ ಟೋಲ್ ಕೆಡಗುವ ಸಂಪೂರ್ಣ ವಿಡಿಯೋ ವೈರಲ್ ಆಗಿದೆ.

Ad Widget . Ad Widget .

ಜೆಸಿಬಿ ಚಾಲಕ ಟೋಲ್ ಬೂತ್ ಮೂಲಕ ಹಾದುಹೋಗುತ್ತಿದ್ದ, ಹಾಗಾಗಿ ಟೋಲ್ ಸಿಬ್ಬಂದಿ ಹಣ ಕೇಳಿದ್ದಾರೆ ಅದಕ್ಕೆ ಚಾಲಕ ಆವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಟೋಲ್ ಮ್ಯಾನೇಜರ್ ಅಜಿತ್ ಚೌಧರಿ ತಿಳಿಸಿದ್ದಾರೆ.

ಜೆಸಿಬಿ ಡಿಕ್ಕಿ ಹೊಡೆದ ರಭಸಕ್ಕೆ ಎರಡು ಟೋಲ್ ಬೂತ್ಗಳು ಮುರಿದಿದ್ದು, ಅಲ್ಲಿ ಅಳವಡಿಸಿದ್ದ ಕ್ಯಾಮರಾಗಳು ಒಡೆದು ಸಾಕಷ್ಟು ಹಾನಿಯಾಗಿದೆ, ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.
ಜೂನ್ 11ರಂದು ಪಿಲ್ಖುವಾ ಪೊಲೀಸ್ ಠಾಣೆ ವ್ಯಾಪ್ತಿಯ ಟೋಲ್ ಪ್ಲಾಜಾದಲ್ಲಿ ಜೆಸಿಬಿ ಚಾಲಕ ಟೋಲ್ ಬೂತ್ ಧ್ವಂಸಗೊಳಿಸಿದ್ದು, ಪಿಲ್ಕೂವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಜೆಸಿಬಿ ಚಾಲಕನನ್ನು ಪೊಲೀಸ8ರು ಬಂಧಿಸಿದ್ದಾರೆ, ಜೆಸಿಬಿಯನ್ನೂ ವಶಕ್ಕೆ ಪಡೆಯಲಾಗಿದೆ. ಸದ್ಯ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Leave a Comment

Your email address will not be published. Required fields are marked *