ಪುತ್ತೂರು: ಹಾಡುಹಗಲೇ ವ್ಯಕ್ತಿ ಮೇಲೆ ಚೂರಿ ಇರಿತ| ಗಾಯಾಳು ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಹಾಡುಹಗಲೇ ವ್ಯಕ್ತಿಯೊಬ್ಬರಿಗೆ ಚೂರಿ ಇರಿದ ಘಟನೆ ಜೂ.13ರಂದು ಪುತ್ತೂರು ಕೋರ್ಟ್ ರಸ್ತೆಯಲ್ಲಿ ನಡೆದಿದೆ.

Ad Widget ... ..

ಘಟನೆಯಲ್ಲಿ ಗುಣಕರ ಶೆಟ್ಟಿ ಮತ್ತು ಸದಾಶಿವ ಪೈ ಎಂಬ ಇಬ್ಬರ ನಡುವೆ ಗಲಾಟೆ ನಡೆದಿದ್ದು, ನಗರದ ದರ್ಬೆ ನಿವಾಸಿ ಸದಾಶಿವ ಪೈ ಚೂರಿ ಇರಿತಕ್ಕೊಳಗಾಗಿದ್ದಾರೆ.

Ad Widget

ಚೂರಿ ಇರಿತದಿಂದ ಗಾಯಗೊಂಡ ಸದಾಶಿವ ಅವರನ್ನು ಪುತ್ತೂರು‌ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನ ಪಾರ್ಕಿಂಗ್ ವಿಚಾರದಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Leave a Comment

Your email address will not be published. Required fields are marked *