Ad Widget .

ರೈಲಿನೊಳಗೆ ಪ್ರೇಮಿಗಳ ಲವ್ವಿಡವ್ವಿ| ಪ್ರೀತಿ ಕುರುಡು ನಿಜ…ಆದ್ರೆ ಸಾರ್ವಜನಿಕವಾಗಿ ಸರಸವಾಡುವಷ್ಟೇ? ಮುಜುಗರಕ್ಕೀಡಾದ ಸಹ ಪ್ರಯಾಣಿಕರು!!

ಸಮಗ್ರ ನ್ಯೂಸ್: ಪ್ರೇಮಿಗಳು ಕುರುಡುತನ ತೋರಿದ್ರೆ ಸಾರ್ವಜನಿಕರಿಂದ ಧರ್ಮದೇಟು ಬೀಳುವುದಂತು ಪಕ್ಕಾ. ಏಕೆಂದರೆ ಬಸ್‌, ಟ್ರೈನ್‌, ಮೆಟ್ರೋ, ಪಾರ್ಕ್‌ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಕೆಲವೊಂದು ಎಲ್ಲೆ ಮೀರಿದ ಪ್ರೇಮಿಗಳು ಅಸಭ್ಯವಾಗಿ ವರ್ತಿಸುತ್ತಿರುತ್ತಾರೆ. ಇಂತಹ ಅನುಚಿತ ವರ್ತನೆಗಳು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುತ್ತವೆ. ಇತ್ತೀಚಿಗಂತೂ ಇಂತಹ ಕೆಲವೊಂದು ಸುದ್ದಿಗಳು ಆಗಾಗ್ಗೆ ಕೇಳಿಬರುತ್ತಿರುತ್ತವೆ. ಇದೀಗ ಅಂತಹದೇ ಸುದ್ದಿಯೊಂದು ವೈರಲ್‌ ಆಗಿದ್ದು, ಪ್ರೇಮಿಗಳಿಬ್ಬರು ರೈಲಿನಲ್ಲಿ ರೊಮ್ಯಾನ್ಸ್‌ ಮಾಡಿ ಸಹ ಪ್ರಯಾಣಿಕರಿಗೆ ಮುಜುಗರ ಉಂಟುಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್‌ ಆಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಇವರುಗಳ ಎಲ್ಲೆ ಮೀರಿದ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

Ad Widget . Ad Widget .

ಇತ್ತೀಚಿಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳ ಸರಸ ಸಲ್ಲಾಪದ ಸುದ್ದಿಗಳು ಹೆಚ್ಚಾಗಿ ಕೇಳಿ ಬರುತ್ತಿದೆ. ಇದೀಗ ಅಂಹತದೇ ಘಟನೆಯೊಂದು ನಡೆದಿದ್ದು, ಲೋಕದ ಅರಿವೇ ಇಲ್ಲದೆ ಪ್ರೇಮಿಗಳಿಬ್ಬರು ರೈಲಿನಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದಾರೆ. ಈ ವಿಡಿಯೋವನ್ನು HasnaZarurihai ಎಂಬ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಓಯೋ ಸೌಲಭ್ಯವು ಈಗ ಭಾರತೀಯ ರೈಲ್ವಯಲ್ಲಿಯೂ ಲಭ್ಯವಿದೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

Ad Widget . Ad Widget .

ವೈರಲ್‌ ವಿಡಿಯೋದಲ್ಲಿ ರೈಲಿನಲ್ಲಿ ಪ್ರೇಮಿಗಳಿಬ್ಬರು ರೊಮ್ಯಾನ್ಸ್‌ ಮಾಡುತ್ತಾ ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯವನ್ನು ಕಾಣಬಹುದು. ಪ್ರೇಮಿಗಳಿಬ್ಬರು ರೈಲಿನ ಸ್ಲೀಪಿಂಗ್‌ ಕೋಚ್‌ ಅಲ್ಲಿ ಒಂದೇ ಸೀಟ್‌ ಅಲ್ಲಿ ಮಲಗಿ ಲೋಕದ ಅರಿವೇ ಇಲ್ಲದೆ ಲವ್ವಿ ಡವ್ವಿ ಶುರು ಹಚ್ಚಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಟಿಕೆಟ್‌ ಚೆಕ್ಕಿಂಗ್‌ಗೆಂದು ಬಂದ ಟಿಸಿ ಕೂಡಾ ಇವರ ಈ ನಡೆಗೆ ಮುಜುಗರಕ್ಕೊಳಗಾಗಿದ್ದಾರೆ. ಆದ್ರೂ ಕೂಡಾ ಈ ಪ್ರೇಮ ಪಕ್ಷಿಗಳು ಅಸಭ್ಯವಾಗಿ ವರ್ತಿಸುವುದನ್ನು ನಿಲ್ಲಿಸಲೇ ಇಲ್ಲ.

ಜೂನ್‌ 11 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಹೀಗೆ ಅಸಭ್ಯವಾಗಿ ವರ್ತಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *