Ad Widget .

ಕ್ಯಾನ್ಸರ್ ನಿಂದ ಪತಿ ಸಾವು: ಶವವನ್ನು ಮನೆ ಒಳಗೆ ತರಬೇಡಿ ಎಂದ ಪತ್ನಿ…!

ಸಮಗ್ರ ನ್ಯೂಸ್: ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದ ಸೋಮವಾರಪೇಟೆಯ ಗುರು ಕಿತ್ತೂರ (51) ಎಂಬುವರು ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ. ಈ ಕ್ಯಾನ್ಸರ್ ಗೆ ಹೆದರಿ ಪತಿಯ ಶವವನ್ನು ಪತ್ನಿ ಹಾಗೂ ಪತ್ನಿಯ ಕುಟುಂಬಸ್ಥರು ಮನೆಯೊಳಗೆ ತರಲು ಬಿಡದೆ ಅಮಾನವೀಯವಾಗಿ ವರ್ತಿಸಿದ್ದಾರೆ. ಬಳಿಕ ಸ್ಥಳೀಯರು ಮನೆಯ ಹೊರಗಿನ ವಿದ್ಯುತ್ ಕಂಬಕ್ಕೆ ಶವವನ್ನು ಆಧಾರವಾಗಿಸಿ ಕೂರಿಸಿದ್ದಾರೆ.

Ad Widget . Ad Widget .

ಗುರು ಕಿತ್ತೂರು ಕಳೆದೆರಡು ತಿಂಗಳಿಂದ ಪತ್ನಿ ಮನೆಯಲ್ಲಿ ವಾಸವಾಗಿದ್ದರು. ಕ್ಯಾನ್ಸರ್ನಿಂದ ಜಿಗುಪ್ಸೆಗೊಂಡ ಗುರು ಕಿತ್ತೂರು ಇತ್ತೀಚಿಗೆ ಮನೆ ತೊರೆದಿದ್ದರು. ಮಂಗಳವಾರ (ಜೂನ್ 11) ರಂದು ಬನಹಟ್ಟಿ ನಗರದ ವೈಭವ ಚಿತ್ರಮಂದಿರ ಬಳಿಯ ರಸ್ತೆ ಪಕ್ಕ ಮೃತಪಟ್ಟರು. ನಂತರ ಸ್ಥಳೀಯರು ಶವವನ್ನು ಮನೆಗೆ ತಂದಾಗ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಮನೆಯೊಳಗೆ ಶವ ಕೂಡಿಸಬೇಡಿ ಅಂತ ಅಮಾನವೀಯವಾಗಿ ವರ್ತಿಸಿದ್ದಾರೆ.

Ad Widget . Ad Widget .

ನಂತರ ಅಕ್ಕ-ಪಕ್ಕದ ಜನ ಮನೆ ಮುಂದಿರುವ ವಿದ್ಯುತ್ ಕಂಬಕ್ಕೆ ಶವವನ್ನು ಆಧಾರವಾಗಿಸಿ ಕೂಡಿಸಿದರು. ಇದನ್ನು ಗಮನಿಸಿದ ಸೋಮವಾರ ಪೇಟೆ ಸಮಸ್ತ ದೈವ ಮಂಡಳಿ, ಗುರು ಕಿತ್ತೂರು ಅವರ ಪತ್ನಿ ಹಾಗೂ ಆಕೆಯ ಮನೆಯವರಿಗೆ ತಿಳುವಳಿಕೆ ಹೇಳಿದರು. ನಂತರ ಶವವನ್ನು ಮನೆಯಲ್ಲಿ ಕೂಡಿಸಲು ಅನುಮತಿ ನೀಡಿದರು. ಬಳಿಕ ಅಂತ್ಯಸಂಸ್ಕಾರ ನೆರವೇರಿತು.

Leave a Comment

Your email address will not be published. Required fields are marked *