Ad Widget .

ಚಿಕ್ಕಮಗಳೂರು: ಡೆಂಗ್ಯೂ ಜ್ವರಕ್ಕೆ ಕಾಫಿನಾಡಿನ ಜನರ ತತ್ತರ | ತ್ರಿಶತಕ ದಾಟಿದ ಡೆಂಗ್ಯೂ ಪ್ರಕರಣ

ಸಮಗ್ರ ನ್ಯೂಸ್: ಕಾಫಿನಾಡು ಚಿಕ್ಕಮಗಳೂರಲ್ಲಿ ಕಳೆದೊಂದು ದಶಕದಿಂದ ಹಿಂದೆಂದೂ ಕಾಣದ ರೀತಿಯಲ್ಲಿ ಡೆಂಗ್ಯೂ ಮಹಾಮಾರಿ ತಾಂಡವವಾಡುತ್ತಿದೆ. ಪ್ರತಿನಿತ್ಯ ಜಿಲ್ಲೆಯಾದ್ಯಂತ ಐದಾರು ಪ್ರಕರಣಗಳು ದಾಖಲಾಗುತ್ತಿದ್ದು, ಸದ್ಯಕ್ಕೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ 300ರ ಗಡಿ ದಾಟಿದ್ದು ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ.

Ad Widget . Ad Widget .

ಇದರಿಂದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಬರದಿಂದ ಕಂಗೆಟ್ಟಿದ್ದ ಜಿಲ್ಲೆಯಲ್ಲಿ ಸದ್ಯಕ್ಕೆ ಉತ್ತಮ ಮಳೆಯಾಗ್ತಿದೆ. ಈ ಮಧ್ಯೆ ಡೆಂಗ್ಯೂ ಪ್ರಕರಣಗಳ ರುದ್ರನರ್ತನ ಕೂಡ ದಿನದಿಂದ ದಿನಕ್ಕೆ ಜಿಲ್ಲೆಯನ್ನು ಕಾಡುತ್ತಿದೆ. ಚಿಕ್ಕಮಗಳೂರು ತಾಲೂಕು ಒಂದರಲ್ಲೇ 250 ಪ್ರಕರಣಗಳಿದ್ದು ಜಿಲ್ಲೆಯಾದ್ಯಂತ 350 ಡೆಂಗ್ಯೂ ಪ್ರಕರಣಗಳು ತಾಂಡವವಾಡ್ತಿದೆ.

Ad Widget . Ad Widget .

ಬೇಸಿಗೆ ಅವಧಿಯಲ್ಲಿ ಮಳೆ ಇಲ್ಲದೆ ಚರಂಡಿ, ಮೋರಿ-ಕಾಲುವೆಗಳಲ್ಲಿ ನೀರು ನಿಂತು ಸೊಳ್ಳೆಗಳ ಲಾರ್ವ ಪ್ರಮಾಣ ಹೆಚ್ಚಾಗಿ ಸೊಳ್ಳೆಗಳ ಕಾಟವು ಜಿಲ್ಲೆಯಲ್ಲಿ ಮಿತಿ ಮೀರಿದೆ ಇದರ ಪರಿಣಾಮ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣ ಅಂತಾರೆ ವೈದ್ಯರು.

ಜೊತೆಗೆ ವಾರಕ್ಕೊಮ್ಮೆ ನೀರು ಬರುತ್ತೆ ಅಂತ ನೀರನ್ನ ಶೇಖರಿಸಿಕೊಂಡು ಮುಚ್ಚದೆ ಇರೋದ್ರಿಂದಲೂ ಡೆಂಗ್ಯೂ ಬಂದಿದೆ ಅನ್ನೋದು ವೈದ್ಯರ ಸ್ಪಷ್ಟನೆ. ರೋಗದಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಅವಶ್ಯಕತೆ ಇದ್ದರೆ ಮಾತ್ರ ಅಡ್ಮಿಟ್ ಮಾಡಿಕೊಳ್ಳಲಾಗುತ್ತಿದ್ದು, ಉಳಿದವರನ್ನು ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಾರೆ, ಡೆಂಗ್ಯೂ ಆತಂಕ ಬೇಡ, ಎಚ್ಚರವಿರಲಿ ಎನ್ನುವ ಸಂದೇಶವನ್ನು ಚಿಕ್ಕಮಗಳೂರು ಆರೋಗ್ಯ ಇಲಾಖೆ ನೀಡುತ್ತಿದ್ದು, ಸೊಳ್ಳೆಗಳಿಂದ ಸೂಕ್ತ ರಕ್ಷಣೆ ಪಡೆಯಲು ಜನರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ.ಆದರೂ, ಈ ಪರಿ ಡೆಂಗ್ಯೂ ಮಹಾಮಾರಿ ಜಿಲ್ಲೆಯನ್ನು ಕಾಡುತ್ತಿದ್ದು ಸರ್ಕಾರ ಹಾಗೂ ಆರೋಗ್ಯ ಇಲಾಖೆ ಮತ್ತಷ್ಟು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ.

Leave a Comment

Your email address will not be published. Required fields are marked *