Ad Widget .

ಬೆಂಗಳೂರಿನ ಪಾರ್ಕ್ ಗಳ ಸಮಯ ವಿಸ್ತರಣೆ| ಹೊಸ ಸಮಯ ನಿಗದಿ ಪಡಿಸಿ ಡಿಸಿಎಂ ಆದೇಶ

ಸಮಗ್ರ ನ್ಯೂಸ್: ಬೆಂಗಳೂರಿನ ಜನರಿಗೆ ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಗುಡ್ ನ್ಯೂಸ್ ನೀಡಿದೆ. ಹೌದು ಬೆಂಗಳೂರಿನಲ್ಲಿರುವ ಎಲ್ಲಾ ಪಾರ್ಕ್ ಗಳ ಸಮಯವನ್ನು ವಿಸ್ತರಣೆ ಮಾಡಲಾಗಿದೆ. ಇನ್ನು ಮುಂದೆ ಪ್ರತಿದಿನ ಬೆಳಗಿನ ಜಾವ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪಾರ್ಕ್ ಗಳು ತೆರೆದಿರುತ್ತದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇದೇ ವಿಚಾರವಾಗಿ ಡಿಸಿಎಂ, ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿ.ಕೆ ಶಿವಕುಮಾರ್ ನಿನ್ನೆ ಮಾಧ್ಯಮಗೋಷ್ಠಿ ನಡೆಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಉದ್ಯಾನವನದಲ್ಲಿ ಹೆಚ್ಚಿನ ಭದ್ರತೆಗೆ ಪಾಲಿಕೆ ವತಿಯಿಂದ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Ad Widget . Ad Widget . Ad Widget .

ಈ ಹಿಂದೆ ಬೆಳಗ್ಗೆ 5ರಿಂದ ಬೆಳಗ್ಗೆ 10ರ ತನಕ ಪಾರ್ಕ್‍ಗಳು ತೆರೆದಿರುತ್ತಿತ್ತು. ಬಳಿಕ ಮಧ್ಯಾಹ್ನ 1:30ರಿಂದ ರಾತ್ರಿ 8ರ ತನಕ ಪಾರ್ಕ್‍ಗಳನ್ನು ತೆರೆಯಲು ಅವಕಾಶ ಇತ್ತು. ಈಗ ನಾಗರಿಕರ ಒತ್ತಾಯದ ಮೇರೆಗೆ ಪಾರ್ಕ್ ತೆರೆಯುವ ಸಮಯ ಹೆಚ್ಚಳ ಮಾಡಿದ್ದೇವೆ. ಪಾರ್ಕ್‍ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಇರುತ್ತೆ, ಎಲ್ಲಾ ರೀತಿಯ ಸುರಕ್ಷಿತ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು. ಆದ್ರೆ, ಲಾಲ್ ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ತೋಟಗಾರಿಕೆ ವ್ಯಾಪ್ತಿಯಲ್ಲಿ ಇರುವ ಪಾರ್ಕ್ ಗಳಿಗೆ ಈ ಅವಧಿ ವಿಸ್ತರಣೆ ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ 1200 ಕ್ಕೂ ಹೆಚ್ಚು ಉದ್ಯಾನವನಗಳನ್ನು ಹೊಂದಿದೆ. ಇದು ದೇಶದಲ್ಲೇ ಅತಿ ಹೆಚ್ಚು ಉದ್ಯಾನವನಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿದೆ. ಪ್ರತಿಯೊಂದು ವಾರ್ಡ್‌ನಲ್ಲಿಯೂ ಉದ್ಯಾನವನವಿದೆ. ನಾಗರಿಕರು ಈ ಸ್ಥಳಗಳನ್ನು ವಾಕಿಂಗ್, ಜಾಗಿಂಗ್, ವ್ಯಾಯಾಮ, ಸಾಮಾಜಿಕವಾಗಿ ಮತ್ತು ಮುಖ್ಯವಾಗಿ ಆಶ್ರಯಕ್ಕಾಗಿ ಬಳಸುತ್ತಾರೆ ಎಂದರು.

Leave a Comment

Your email address will not be published. Required fields are marked *