Ad Widget .

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡರಿಗೆ ‘ಅವನಿ’ ಕಿರು ಚಿತ್ರತಂಡದವರಿಂದ ಸನ್ಮಾನ| 58ನೇ ಹುಟ್ಟುಹಬ್ಬದ ಶುಭಾಶಯ

ಸಮಗ್ರ ನ್ಯೂಸ್: ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ರವರನ್ನು ಇಂದು ರಾಜ್ಯ ಕೇಂದ್ರ ಕಚೇರಿಯಲ್ಲಿ ‘ಅವನಿ’ ಕಿರು ಚಿತ್ರತಂಡದ ವತಿಯಿಂದ ಶಾಲು ಹೊದಿಸಿ ಫಲ ಪುಷ್ಪ ನೀಡಿ 58ನೇ ಹುಟ್ಟುಹಬ್ಬದ ಶುಭಾಶಯದೊಂದಿಗೆ ಸನ್ಮಾನಿಸಲಾಯಿತು..

Ad Widget . Ad Widget .

ಅವನಿ ಕಿರು ಚಿತ್ರವು ಶಶಿ ಬೆಳ್ಳಾಯರು ಅವರ ಕಥೆ, ಸಾಹಿತ್ಯ,ನಿರ್ದೇಶನದಲ್ಲಿ ಮೂಡಿಬರಲಿದ್ದು, ಎಸ್.ಆರ್.ಎಸ್ ಪ್ರೊಡಕ್ಷನ್ ಹೌಸಿನ ಹಾಗೂ ಧಾರವಾಹಿಯ ನಿರ್ವಹಣೆ, ಕಾರ್ಯಕಾರಿ ನಿರ್ಮಾಪಕ ಸುಜಿತ್ ಕುಮಾರ್ ಫರಂಗಿಪೇಟೆ, ಲಯನ್ ಅನಿಲ್ ದಾಸ್ ಮಂಗಳೂರು, ದಿನೇಶ್ ಸುವರ್ಣ ಪಡುಪಣಂಬೂರು ಇವರ ನೇತೃತ್ವದಲ್ಲಿ ಮೂಡಿಬಂದ ಕನ್ನಡ ಮೆಗಾ ಧಾರಾವಾಹಿ ‘ಅವನಿ’ ಕಿರುಚಿತ್ರದ ಪೋಸ್ಟರನ್ನು ಟಿ.ಎ.ನಾರಾಯಣ ಗೌಡರು ಬಿಡುಗಡೆ ಮಾಡಿ ಶುಭ ಹಾರೈಸಿ ಮಾತನಾಡಿದರು.

Ad Widget . Ad Widget .

ಕರ್ನಾಟಕ ರಾಜ್ಯಾದ್ಯಂತ ಜನಮೆಚ್ಚಿನ ಅಭಿಮತ ಕೇಬಲ್ ನೆಟ್ ವರ್ಕ್ ಚಾನೆಲ್ನಲ್ಲಿ ಪ್ರಸಾರ ವಾಗುವ ‘ಅವನಿ’ ಕನ್ನಡ ಮೆಗಾ ಧಾರಾವಾಹಿಯು ಉತ್ತಮ ಕಥಾ ವಸ್ತುವನ್ನು ಹೊಂದಿದ್ದು ಒಂದು ಪ್ರಾಮಾಣಿಕ, ಗುಣವಂತೆ, ಶಿಸ್ತಿನ ಹುಡುಗಿಯ ಸುತ್ತ ಹೆಣೆದಿರುವ ಕಥೆಯಾಗಿದ್ದು, ಬದುಕಿನ ವಸ್ತು ಸ್ಥಿತಿಯನ್ನು ಸಮಾಜದ ಮುಂದೆ ಹಿಡಿದಿರುವ ನಿರ್ದೇಶಕರ ಪ್ರಯತ್ನ ಸಪಲವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹಾಗೂ ಅವನಿ ಧಾರಾವಾಹಿಯ ನಿರ್ಮಾಪಕರಲ್ಲಿ ಓರ್ವ ಲಯನ್ ಅನಿಲ್ ದಾಸ್ ಮಂಗಳೂರು, ಸುಜಿತ್ ಕುಮಾರ್ ಫರಂಗಿಪೇಟೆ ದಿನೇಶ್ ಸುವರ್ಣ ಪಡುಪಣಂಬೂರು, ಕ.ರಾ.ವೇ ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಡಿಸೋಜ, ಕಾರ್ಯದರ್ಶಿ ಕಿರಣ್ ಅಟ್ಟಲೂರ್, ಅವನಿ ಧಾರವಾಹಿಯ ಪ್ರಮುಖ ನಟರಲ್ಲೊಬ್ಬ ಸಯ್ಯದ್ ವಹಿದ್ ಖಾನ್ ಬೆಂಗಳೂರು ಹಾಗೂ ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *