Ad Widget .

ಅಂಗಡಿಯ ಪರದೆ ಸರಿಸಿ ಹಣ್ಣು ತಿಂದು ತೆರಳುವ ಕಾಡಾನೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಹಲವೆಡೆ ಕಾಡಾನೆಗಳು ಕಾಫಿ ತೋಟ ಮತ್ತು ಜನವಸತಿ ಪ್ರದೇಶಗಳ ಮೇಲೆ ಲಗ್ಗೆಯಿಟ್ಟು ಕಂಟಕಪ್ರಾಯವಾಗಿ ಪರಿಣಮಿಸಿರುವುದರ ನಡುವೆ ಇದಕ್ಕೆ ವ್ಯತಿರಿಕ್ತವಾಗಿ ಇಲ್ಲೊಂದು ಸಲಗ ಸದ್ದಿಲ್ಲದೇ ಅಂಗಡಿಯೊಂದರಿಂದ ಹಣ್ಣು ಹಂಪಲುಗಳನ್ನು ತಿಂದು ಯಾವುದೇ ತೊಂದರೆ ಮಾಡದೇ ತನ್ನಪಾಡಿಗೆ ಹೊರಟು ಹೋಗುತ್ತಿದೆ.

Ad Widget . Ad Widget .

ಕಳೆದ ಎರಡು ದಿನಗಳಿಂದ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಕಾಡಾನೆಯೊಂದು
ಗೋಣಿಕೊಪ್ಪಲು ಪೊನ್ನಂಪೇಟೆ ಮುಖ್ಯರಸ್ತೆಯ ಅರ್ವತೋಕ್ಲು ವಿದ್ಯಾನಿಕೇತನ ಶಾಲೆಗೆ ಹೋಗುವ ರಸ್ತೆಯ ಸಮೀಪದಲ್ಲಿರುವ ಹಣ್ಣು, ತರಕಾರಿ ಅಂಗಡಿಗೆ ಖಾಯಂ ಗಿರಾಕಿ ಎನ್ನುವಂತೆ ಬರುತ್ತಿದೆ. ಅಂಗಡಿಯ ಮುಂಭಾಗದಲ್ಲಿ ಕಟ್ಟಿರುವ ಪರದೆಯನ್ನು ಸರಿಸಿ ಮಾವಿನ ಹಣ್ಣು, ಕಲ್ಲಂಗಡಿ ಹಣ್ಣು, ಬಾಳೆಹಣ್ಣು, ಮೂಸಂಬಿಯನ್ನು ತಿಂದು ತೆರಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Ad Widget . Ad Widget .

ಈ ಕಾಡಾನೆ ಅಂಗಡಿಗೆ ಯಾವುದೇ ರೀತಿಯಲ್ಲಿ ಹಾನಿ ಮಾಡದೆ ತನ್ನಪಾಡಿಗೆ ಹಣ್ಣುಗಳನ್ನು ತಿಂದು ತೆರಳುತ್ತಿರುವುದು ಸೋಜಿಗವೆನಿಸಿದೆ.

ಹಣ್ಣುಗಳನ್ನು ಆನೆ ತಿಂದು ಹೋಗಿರುವ ಬಗ್ಗೆ ಅಂಗಡಿ ಮಾಲೀಕ ರಿಯಾಜ್ ಅವರು ಬೇಸರ ವ್ಯಕ್ತಪಡಿಸದೆ, ಎಂದಿನಂತೆ ಅಲ್ಲೇ ಹಣ್ಣುಗಳನ್ನು ಶೇಖರಿಸಿಟ್ಟು ಮುಂಭಾಗದಲ್ಲಿ ಪರದೆಯನ್ನು ಕಟ್ಟಿ ಮನೆಗೆ ತೆರಳುತ್ತಿದ್ದಾರೆ.

Leave a Comment

Your email address will not be published. Required fields are marked *