Ad Widget .

ಟಿ-20 ವಿಶ್ವಕಪ್| ಪಾಕಿಸ್ತಾನ ವಿರುದ್ಧ ಭಾರತಕ್ಕೆ 6 ರನ್ ಗಳ ರೋಚಕ ಜಯ

ಸಮಗ್ರ ನ್ಯೂಸ್: ನ್ಯೂಯಾರ್ಕ್ ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ T20 World Cup 2024ನ ರೋಚಕ ಪಂದ್ಯದಲ್ಲಿ ಭಾರತ ಆರು ರನ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿದೆ. ಇದರೊಂದಿಗೆ ಲೀಗ್​ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದ ಟೀಂ ಇಂಡಿಯಾ 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

Ad Widget . Ad Widget .

ಸತತ ಎರಡನೇ ಸೋಲು ಅನುಭವಿಸಿದ ಪಾಕ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲೇ ಉಳಿದುಕೊಂಡಿದ್ದು, ಈ ಸೋಲಿನ ನಂತರ ಲೀಗ್ ಹಂತದಲ್ಲೇ ತನ್ನ ಪ್ರಯಾಣ ಮುಗಿಸುವ ಆತಂಕದಲ್ಲಿದೆ.

Ad Widget . Ad Widget .

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 19 ಓವರ್‌ಗಳಲ್ಲಿ 119 ರನ್‌ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಉತ್ತಮ ಆರಂಭದ ಹೊರತಾಗಿಯೂ ಸತತ ವಿಕೆಟ್​ಗಳ ಪತನದ ಕಾರಣ ಹಾಗೂ ಭಾರತದ ವೇಗಿಗಳ ಕರಾರುವಕ್ಕಾದ ದಾಳಿಯಿಂದಾಗಿ 20 ಓವರ್​ಗಳಲ್ಲಿ 113 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಭಾರತದ ಪರ ಬುಮ್ರಾ ಮೂರು ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಟಾಸ್ ಗೆದ್ದ ‍‍ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಂ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನಸೀಂ ಶಾ (21ಕ್ಕೆ3) ಮತ್ತು ಹ್ಯಾರಿಸ್ ರವೂಫ್ (21ಕ್ಕೆ3) ಅವರ ದಾಳಿಯ ಮುಂದೆ ಭಾರತ ತಂಡವು 19 ಓವರ್‌ಗಳಲ್ಲಿ 119 ರನ್‌ಗಳ ಸಾಧಾರಣ ಮೊತ್ತಕ್ಕೆ ಆಲೌಟ್ ಆಯಿತು. ರಿಷಭ್ ಪಂತ್ (42; 31ಎ) ಹಾಗೂ ಅಕ್ಷರ್ ಪಟೇಲ್ (20; 18ಎ) ಅವರಿಬ್ಬರು ಮಾತ್ರ ಹೆಚ್ಚು ರನ್‌ ಗಳಿಸಿದರು. ಉಳಿದ ಬ್ಯಾಟರ್‌ಗಳು ವಿಫಲರಾದರು.

ಆದರೆ ಚೆಂಡು ಹೆಚ್ಚು ಪುಟಿಯದೇ ಅನಿರೀಕ್ಷಿತ ಬೌನ್ಸ್‌ ಮತ್ತು ತಿರುವುಗಳಿಂದ ಬ್ಯಾಟರ್‌ಗಳಿಗೆ ಸವಾಲಾಗಿದ್ದ ಪಿಚ್‌ನಲ್ಲಿ ಭಾರತದ ಬೌಲರ್‌ಗಳೂ ಮಿಂಚಿದರು. ಗುರಿ ಬೆನ್ನಟ್ಟಿದ ಪಾಕ್ ತಂಡವನ್ನು ಕಟ್ಟಿಹಾಕಿದರು. ಬೂಮ್ರಾ (14ಕ್ಕೆ3) ಹಾಗೂ ಪಾಂಡ್ಯ (24ಕ್ಕೆ2) ಅವರ ಅಮೋಘ ಬೌಲಿಂಗ್‌ನಿಂದಾಗಿ ಪಾಕ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 113 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಬಾಬರ್ ಆಜಂ ಹಾಗೂ ಮೊಹಮ್ಮದ್ ರಿಜ್ವಾನ್ ಪಾಕ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಐದನೇ ಓವರ್‌ನಲ್ಲಿ ಬೂಮ್ರಾ ಎಸೆತದಲ್ಲಿ ಬಾಬರ್ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು.

ಈ ಹಂತದಲ್ಲಿ ಉಸ್ಮಾನ್ ಖಾನ್ ಮತ್ತು ರಿಜ್ವಾನ್ ಅವರ ಎರಡನೇ ವಿಕೆಟ್ ಜೊತೆಯಾಟದಲ್ಲಿ 31 ರನ್‌ಗಳು ಬಂದವು. ಆದರೆ ರನ್‌ ಗಳಿಕೆಯ ವೇಗ ಹೆಚ್ಚಿರಲಿಲ್ಲ. ಈ ಜೊತೆಯಾಟಕ್ಕೆ 11ನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ತಡೆಯೊಡ್ಡಿದರು. ಇಮಾದ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು.

ಇದಾದ ನಂತರ ಹಾರ್ದಿಕ್ ಪಾಂಡ್ಯ ಮತ್ತು ಬೂಮ್ರಾ ಅವರು ಪಾಕ್ ಬ್ಯಾಟಿಂಗ್ ಪಡೆಗೆ ದುಃಸ್ವಪ್ನದಂತೆ ಕಾಡಿದರು. 30 ರನ್‌ಗಳ ಅಂತರದಲ್ಲಿ ಪಾಕ್ ತಂಡವು 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಅದರಲ್ಲೂ 15ನೇ ಓವರ್‌ನ ಮೊದಲ ಎಸೆತದಲ್ಲಿಯೇ ಬೂಮ್ರಾ ಅವರು ರಿಜ್ವಾನ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ್ದು ಭಾರತದ ಗೆಲುವಿನ ಸಾಧ್ಯತೆ ಹೆಚ್ಚಿಸಿತು.

ಅಲ್ಲದೇ ವಿಕೆಟ್‌ಕೀಪರ್ ರಿಷಭ್ ಪಂತ್ ಅವರ ಚುರುಕಾದ ಆಟವೂ ತಂಡದ ಗೆಲುವಿಗೆ ಮಹತ್ವದ ಕಾಣಿಕೆ ನೀಡಿತು. ಅವರು ಪಡೆದ ಮೂರು ಕ್ಯಾಚ್‌ಗಳು ಗಮನಸೆಳೆದವು.

Leave a Comment

Your email address will not be published. Required fields are marked *