Ad Widget .

ಮೈಸೂರಿನ ಅನ್ನದಾನೇಶ್ವರ ಮಠದಲ್ಲಿ ಭೀಕರ ಕೊಲೆ| ಮಠಾಧಿಪತಿಯನ್ನೇ ಕೊಚ್ಚಿ ಕೊಲೆಗೈದ ದುಷ್ಕರ್ಮಿ!!

ಸಮಗ್ರ ನ್ಯೂಸ್: ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆ ಮೈಸೂರಿನಲ್ಲಿ ನಡೆದಿದ್ದು, ಇಲ್ಲಿಯ ಅನ್ನದಾನೇಶ್ವರ ಮಠದ ಶಿವಾನಂದ ಸ್ವಾಮೀಜಿ (90) ಅವರನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ಹತ್ಯೆಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಮೈಸೂರಿನ ಸಿದ್ಧಾರ್ಥನಗರ ಸಮೀಪದ ಬನ್ನೂರು ರಸ್ತೆಯಲ್ಲಿರುವ ಅನ್ನದಾನೇಶ್ವರ ಮಠದ ಶಿವಾನಂದ ಸ್ವಾಮೀಜಿ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

Ad Widget . Ad Widget .

ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಎಂಬಾತನನ್ನು ಬಂಧಿಸಿದ್ದು, ಆರೋಪಿ ಸ್ವಾಮೀಜಿಯ ಬಳಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ‌ ಎಂದು ಹೇಳಲಾಗಿದೆ.

ಶಿವಾನಂದ ಸ್ವಾಮೀಜಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಹಿಂದಿನ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ. ಮೈಸೂರಿನ ನಜರ್ ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Leave a Comment

Your email address will not be published. Required fields are marked *