Ad Widget .

ಮೋದಿ 3.0/ ದಕ್ಷಿಣ ಭಾರತದಿಂದ 12 ಮಂದಿಗೆ ಸಚಿವ ಸ್ಥಾನ

ಸಮಗ್ರ ನ್ಯೂಸ್: ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟದ ಮೂರನೇ ಅವಧಿಯ ತಮ್ಮ ಸಂಪುಟ ಸಭೆಗೆ ದಕ್ಷಿಣ ಭಾರತದ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳ ರಾಜ್ಯಗಳ ತಮ್ಮ ಮಿತ್ರ ಪಕ್ಷದ ಸಂಸದರಿಗೆ ಸಂಪುಟ ಸಭೆಯಲ್ಲಿ ಸಚಿವರಾಗಿ ಆಯ್ಕೆಯಾಗಿದ್ದಾರೆ. ದಕ್ಷಿಣ ಭಾರತದಿಂದ ಒಟ್ಟು 12 ಸಂಸದರನ್ನು ಸಂಪುಟಸಭೆಗೆ ಆಯ್ಕೆ ಮಾಡಿದ್ದಾರೆ.

Ad Widget . Ad Widget .

ಕರ್ನಾಟಕದ ಮಾಜಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಹಾಗೂ ಜೆಡಿಎಸ್‍ನಿಂದ ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸಿದರು.

Ad Widget . Ad Widget .

ಆಂಧ್ರಪ್ರದೇಶದಿಂದ ಎನ್‍ಡಿಎ ಮಿತ್ರಪಕ್ಷವಾದ ಟಿಡಿಪಿಯ ಗುಂಟೂರು ಕ್ಷೇತ್ರದ ಸಂಸದ ಡಾ. ಚಂದ್ರಶೇಖರ್ ಪೆಮ್ಮುಸ್ವಾಮಿ ಹಾಗೂ ಶ್ರೀಕಾಕುಳಂ ಕ್ಷೇತ್ರದ ಕಿಂಜರಾಪು ರಾಮ್ ಮೋಹನ್ ನಾಯ್ಡು ಅವರು ಪ್ರಮಾಣವಚನ ಸ್ವೀಕರಿಸಿದರು. ಜನಸೇನಾ ಪಕ್ಷದಿಂದ ಯಾರೂ ಪ್ರಮಾಣಸ್ವೀಕಾರ ಮಾಡಿಲ್ಲ.

ತೆಲಂಗಾಣದಿಂದ ಕಿಶನ್ ರೆಡ್ಡಿ ಹಾಗೂ ಬಂಡಿ ಸಂಜಯ್ ಕುಮಾರ್, ಕೇರಳದಿಂದ ಸುರೇಶ್ ಗೋಪಿ, ಮತ್ತು ಜಾರ್ಜ್ ಕುರಿಯನ್ ಮತ್ತು ತಮಿಳುನಾಡಿನಿಂದ ಮುರಗನ್ ಎಲ್. ಪ್ರಮಾಣವಚನ ಸ್ವೀಕರಿಸಿದ್ದಾರೆ.

Leave a Comment

Your email address will not be published. Required fields are marked *