ಎಸ್ಡಿಪಿಐ ಕಡಬ ಬ್ಲಾಕ್ ನ ಕಡಬ ಪಟ್ಟಣ ಪಂಚಾಯತ್ ಸಮಿತಿಯ ಸಭೆ| ನೂತನ ಪದಾಧಿಕಾರಿಗಳ ಆಯ್ಕೆ

ಸಮಗ್ರ ನ್ಯೂಸ್: ಎಸ್ಡಿಪಿಐ (SDPI) ಕಡಬ ಬ್ಲಾಕ್ ನ ಕಡಬ ಪಟ್ಟಣ ಪಂಚಾಯತ್ ಸಮಿತಿಯ ಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಬ್ಲಾಕ್ ಸಮಿತಿಯ ಅಧ್ಯಕ್ಷ ಹಾರೀಸ್ ಕಡಬ ರವರ ನೇತೃತ್ವದಲ್ಲಿ ಜೂನ್ 8ರಂದು ಕಲಾರದಲ್ಲಿ ನಡೆಯಿತು.

Ad Widget ... ..

ಸಭೆಯಲ್ಲಿ ಕಡಬ ಪಟ್ಟಣ ಪಂಚಾಯತ್ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು. ಅಧ್ಯಕ್ಷರಾಗಿ ನವಾಜ್ ಕಡಬ, ಕಾರ್ಯದರ್ಶಿಯಾಗಿ ಶಕೀಲ್ ರಹೀಮನ್ ಕಳಾರ, ಕೋಶಾಧಿಕಾರಿಯಾಗಿ ಕಮರುದ್ದಿನ್ ಅಲೆಕ್ಕಾಡಿ,
ಉಪಾಧ್ಯಕ್ಷರಾಗಿ ರಫೀಕ್ ಕಳಾರ, ಜೊತೆ ಕಾರ್ಯದರ್ಶಿ ಯಾಗಿ ಆಶೀಕ್ ಕಡಬ
ಇವರನ್ನು ಆರಿಸಲಾಯಿತು.

Ad Widget

ಸಭೆಯಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಬ್ಲಾಕ್ ಅಧ್ಯಕ್ಷ ಹಾರಿಸ್ ಕಡಬ ರವರು ಪಕ್ಷದ ಸಂಸ್ಥಾಪನಾ ದಿನಾಚರಣೆಯನ್ನು ಬೂತ್ ಮಟ್ಟದಲ್ಲಿ ಮಾಡಲು, ತಯಾರಿಗಳನ್ನು ಮಾಡಲು ಕರೆಕೊಟ್ಟರು. ಬ್ಲಾಕ್ ಸಮಿತಿಯ ಕಾರ್ಯದರ್ಶಿ ನಬೀ ಶಾನ್ ರವರು ಸ್ವಾಗತಿಸಿ, ವಂದಿಸಿದರು.

Leave a Comment

Your email address will not be published. Required fields are marked *