Ad Widget .

ಅಂತ್ಯಕ್ರಿಯೆ ವೇಳೆ ಶವದ ಮೇಲೆ ಕುಳಿತು ಅಚ್ಚರಿ ಮೂಡಿಸಿದ ಕಪಿ!

ಸಮಗ್ರ ನ್ಯೂಸ್: ಮೃತಪಟ್ಟ ವ್ಯಕ್ತಿಯೋರ್ವನ ಅಂತ್ಯಕ್ರಿಯೆ ವೇಳೆ ಶವದ ಮೇಲೆ ಕೋತಿ ಬಂದು ಕುಳಿತ ಅಚ್ಚರಿಯ ಘಟನೆಗೆ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ನಡೆದಿದೆ.

Ad Widget . Ad Widget .

ನವಲಗುಂದದ ಬಸವೇಶ್ವರ ನಗರದ ನಿವಾಸಿ ರವಿ ಮಾಗ್ರೆ ಮೊನ್ನೆ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದರು. ಈ ಹಿನ್ನೆಲೆ ರವಿ ಮನೆಯವರು ನಿನ್ನೆ ದಿನ ಅಂತ್ಯಕ್ರಿಯೆ ಮಾಡಲು ತಯಾರಿ ಮಾಡಿಕೊಂಡಿದ್ದರು. ಅದರಂತೆಯೇ ಅಂತ್ಯಕ್ರಿಯೆಗೆ ಸ್ಮಶಾನಕ್ಕೆ ಹೋಗಿ ಅಗ್ನಿ ಸ್ಪರ್ಶ ಮಾಡೊಣ ಎನ್ನುವಷ್ಟರಲ್ಲಿ ಈ ಕೋತಿ ಸಾವನ್ನಪ್ಪಿದ ವ್ಯಕ್ತಿಯ ಎದೆಯ ಮೇಲೆಯೇ ಬಂದು ಕುಳಿತಿದೆ.

Ad Widget . Ad Widget .

ಈ ಕೋತಿಗೆ ಸಾವನ್ನಪ್ಪಿದ ವ್ಯಕ್ತಿಯ ಎದೆಯ ಮೇಲಿಂದ ಎಷ್ಟೇ ಓಡಿಸಿದರೂ ಸಹ ಕೆಳಗೆ ಇಳಿಯಲೇ ಇಲ್ಲ. ಕೊನೆಗೆ ಮೃತದೇಹಕ್ಕೆ ಬೆಂಕಿ ಸ್ಪರ್ಶಿಸಿದಾಗ ಕೋತಿ ಕೆಳಗೆ ಇಳಿದಿದೆ. ಮೃತದೇಹಕ್ಕೆ ಬೆಂಕಿ ಹಚ್ಚಿದ ನಂತರ ಅಲ್ಲಿಯೇ ಪಕ್ಕಕ್ಕೆ ಕುಳಿತ ಕೋತಿ, ಕೊನೆಗೆ ಎಲ್ಲರೂ ಹೋದ ಮೇಲೆ ಹೋಗಿದೆ.

ಸದ್ಯ ಈ ಅಚ್ಚರಿಯ ಘಟನೆ ಸ್ಥಳದಲ್ಲಿದ್ದ ಜನರು ತಮ್ಮ ತಮ್ಮ ಮೊಬೈಲ್ ಗಳಲ್ಲಿ ಶೂಟ್ ಮಾಡಿಕೊಂಡಿದ್ದು, ಆ ವಿಡಿಯೋ ಈಗ ವೈರಲ್ ಆಗಿವೆ.

Leave a Comment

Your email address will not be published. Required fields are marked *