Ad Widget .

ಮಹಿಳೆಯ ಕೊಲೆಗೈದು ಶವವನ್ನು ರೈಲಿನಲ್ಲಿಟ್ಟ ದುಷ್ಕರ್ಮಿಗಳು

ಸಮಗ್ರ ನ್ಯೂಸ್: ಮಹಿಳೆಯ ಹತ್ಯೆಗೈದು ಎರಡು ಚೀಲಗಳಲ್ಲಿ ತುಂಬಿ ರೈಲಿನಲ್ಲಿ ಇಟ್ಟು ಹೋದ ಪ್ರಕರಣ ಮಧ್ಯಪ್ರದೇಶದ ಇಂದೋರ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

Ad Widget . Ad Widget .

ದಿನಗಳ ಹಿಂದೆ ಮಹಿಳೆಯನ್ನು ಬೇರೆ ಸ್ಥಳದಲ್ಲಿ ಕೊಲೆ ಮಾಡಲಾಗಿದೆ. ಬಳಿಕ ಶವವನ್ನು ಕತ್ತರಿಸಿ ಬ್ಯಾಗ್‍ನಲ್ಲಿ ತುಂಬಿ ಶನಿವಾರ (ಜೂ.8) ರಾತ್ರಿ ರೈಲಿನಲ್ಲಿ ತಂದು ಇರಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಚೀಲದಲ್ಲಿ ಮಹಿಳೆಯ ಕೈ ಹಾಗೂ ಕಾಲುಗಳು ಪತ್ತೆಯಾಗಿಲ್ಲ. ಚೀಲಗಳನ್ನು ವಶಕ್ಕೆ ಪಡೆದು ರೈಲ್ವೇ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Ad Widget . Ad Widget .

ರೈಲಿನ ಸ್ವಚ್ಛತಾ ಸಿಬ್ಬಂದಿ ಬೋಗಿಯ ಒಳಗೆ ಸ್ವಚ್ಛಗೊಳಿಸುತ್ತಿದ್ದಾಗ ಎರಡು ಬ್ಯಾಗ್‍ಗಗಳು ಪತ್ತೆಯಾಗಿವೆ ಎಂದು ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಪೊಲೀಸರು ಬ್ಯಾಗ್ ಪರಿಶೀಲನೆ ಮಾಡಿದಾಗ ಮಹಿಳೆಯ ಮೃತದೇಹ ತುಂಡು ತುಂಡಾಗಿ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹತ್ಯೆಯಾದ ಮಹಿಳೆ ಸುಮಾರು 20 ರಿಂದ 25 ವರ್ಷ ವಯಸ್ಸಿನವಳೆಂದು ಅಂದಾಜಿಸಲಾಗಿದೆ. ಮಹಿಳೆಯ ಗುರುತು ಪತ್ತೆಗೆ ಪ್ರಯತ್ನಗಳು ನಡೆಯುತ್ತಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Comment

Your email address will not be published. Required fields are marked *