ಸಮಗ್ರ ನ್ಯೂಸ್: ಈನಾಡು ಮೀಡಿಯಾ ಗ್ರೂಪ್ ಅಧ್ಯಕ್ಷ ರಾಮೋಜಿ ಫಿಲ್ಮ್ ಸಿಟಿ ಸಂಸ್ಥಾಪಕ ರಾಮೋಜಿ ರಾವ್ (87) ಇನ್ನಿಲ್ಲ. ಶನಿವಾರ ಮುಂಜಾನೆ ರಾವ್ ಅವರು ಹೈದರಾಬಾದ್ನ ಸ್ಟಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಕೊನೆಯುಸಿರೆಳೆದಿದ್ದಾರೆ.
ಪ್ರಸಿದ್ಧ ವಾಣಿಜ್ಯೋದ್ಯಮಿ ರಾಮೋಜಿ ಗ್ರೂಪ್ ಮತ್ತು ಈಟಿವಿ ಭಾರತ್ ಮಾಧ್ಯಮ ಸಂಸ್ಥೆ ಸಂಸ್ಥಾಪಕ ರಾಮೋಜಿ ರಾವ್ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.
ಈ ಕಾರಣದಿಂದ ಅವರು ಇದೇ ಜೂನ್ 5ರಂದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾದೇ ಶನಿವಾರ ಬೆಳಗಿನ ಜಾವ 4:50ಕ್ಕೆ ಅವರು ನಿಧನರಾದರು.
ರಾಮೋಜಿ ರಾವ್ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ತೀವ್ರವಾಗಿ ಬಳಲುತ್ತಿದ್ದರು ಎನ್ನಲಾಗಿದೆ. ಮೂಲಗಳ ಪ್ರಕಾರ ಅವರು ಸಾಕಷ್ಟು ಆರೋಗ್ಯ ಸಂಬಂಧಿತ ಸಮಸ್ಯೆಗಳ ವಿರುದ್ಧ ಹೋರಾಡುತ್ತಲೇ ಬಂದಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗಲಿಲ್ಲ.
ಮೃತ ರಾಮೋಜಿ ರಾವ್ ಅವರ ಪಾರ್ಥಿವ ಶರೀರವನ್ನು ಹೈದರಾಬಾದ್ ನಲ್ಲಿರುವ ‘ರಾಮೋಜಿ ಫಿಲ್ಮ್ ಸಿಟಿ’ಯಲ್ಲಿರುವ ಅವರ ನಿವಾಸಕ್ಕೆ ಒಯ್ಯಲು.ಅಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ.
ಅವರ ಕುಟುಂಬ ಸದಸ್ಯರು, ಆಪ್ತರು, ಸ್ನೇಹಿತರು Grand ಹಿತೈಷಿಗಳು ಅಗಲಿದ ಆತ್ಮಕ್ಕೆ ಅಂತಿಮ ನಮನ ಸಲ್ಲಿಸಲಿದ್ದಾರೆ. ಉದ್ಯಮ ರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ರಾಮೋಜಿ ರಾವ್ ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.