Ad Widget .

ಉತ್ತರಾಖಂಡ್ ಚಾರಣ ದುರಂತದಲ್ಲಿ ಸಿಲುಕಿದ 13 ಜನ ಕೃಷ್ಣ ಭೈರೇಗೌಡ ನೇತೃತ್ವದಲ್ಲಿ ಬೆಂಗಳೂರಿಗೆ ವಾಪಸ್

ಸಮಗ್ರ ನ್ಯೂಸ್: ಉತ್ತರಾಖಂಡ್ ಗೆ ಚಾರಣಕ್ಕೆಂದು ಕರ್ನಾಟಕದ 21 ಜನರು ತೆರಳಿದ್ದರು. ಈ ವೇಳೆ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ ಚಾರಣಿಗರು ಉತ್ತರಾಖಂಡದ ಸಹಸ್ತ್ರತಲ್‌ನಲ್ಲಿ ಅಪಾಯಕ್ಕೆ ಸಿಲುಕಿದ್ದು, ಆ ಪೈಕಿ 9 ಮಂದಿ ಮೃತಪಟ್ಟಿದ್ದರು.

Ad Widget . Ad Widget .

ಇದರಲ್ಲಿ ಬದುಕುಳಿದವರ ರಕ್ಷಣೆಗಾಗಿ ತುರ್ತು ಕಾರ್ಯಾಚರಣೆ ನಡೆಸಿ, ಮೃತಪಟ್ಟ ಕನ್ನಡಿಗರ ಶವಗಳನ್ನು ಬೆಂಗಳೂರಿಗೆ ತರುವ ಬಗ್ಗೆ ಉತ್ತರಾಖಂಡ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಕಾರ್ಯದರ್ಶಿ ಜೊತೆ ರಾಜ್ಯದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಮಾತುಕತೆ ನಡೆಸಿ, ಇದೀಗ ಕೃಷ್ಣಬೈರೇಗೌಡ ಅವರು ಡೆಹ್ರಾಡೂನ್ ನಿಂದ ಕನ್ನಡಿಗರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತಂದಿದ್ದಾರೆ.

Ad Widget . Ad Widget .

ಬೆಂಗಳೂರಿನ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಚಿವ ಕೃಷ್ಣಬೈರೆಗೌಡ ಜೊತೆ ಇಂಡಿಗೋ ವಿಮಾನದಲ್ಲಿ 13 ಜನ ಕನ್ನಡಿಗರು ಆಗಮಿಸಿದ್ದಾರೆ.

ಮೃತಪಟ್ಟವರು:
1) ಸುಜಾತ, ಬೆಂಗಳೂರು -52 ವರ್ಷ
2) ಸಿಂಧು , ಪ್ರಾಯ-47 ವರ್ಷ
3) ಚಿತ್ರಾ, ಪ್ರಾಯ-48 ವರ್ಷ
4) ಪದ್ಮಿನಿ ವಯಸ್ಸು 45 ವರ್ಷ
5) ವೆಂಕಟೇಶ್‌ ಪ್ರಸಾದ್‌ 52 ವರ್ಷ
6) ಅನಿತಾ, ಪ್ರಾಯ 61 ವರ್ಷ
7) ಆಶಾ ಸುಧಾಕರ, ಪ್ರಾಯ 72 ವರ್ಷ
8) ಪದ್ಮನಾಭನ್ ಕೆಪಿಎಸ್‌, ವಯಸ್ಸು 50 ವರ್ಷ
9) ವಿನಾಯಕ್

ರಕ್ಷಣೆಗೊಳಗಾದವರು:

1) ಸೌಮ್ಯಾ, 36 ವರ್ಷ
2) ವಿನಯ್, 49 ವರ್ಷ
3) ಶಿವಜ್ಯೋತಿ- 46 ವರ್ಷ
4) ಸುಧಾಕರ್‌, 64 ವರ್ಷ
5) ಸ್ಮೃತಿ, 41 ವರ್ಷ
6) ಸೀನಾ, 48 ವರ್ಷ
7) ಮಧುರೆಡ್ಡಿ- 52 ವರ್ಷ
8) ಜಯಪ್ರಕಾಶ್- 61 ವರ್ಷ
9) ಭರತ್- 53 ವರ್ಷ
10) ಅನಿಲ್ ಭಟ್- 52 ವರ್ಷ
11)‌ ವಿವೇಕ್ ಶ್ರೀಧರ್
12) ರಿತಿಕಾ ಜಿಂದಾಲ್
13) ನವೀನ್ ಎ

Leave a Comment

Your email address will not be published. Required fields are marked *