Ad Widget .

ಟಿ-20 ವಿಶ್ವಕಪ್| ಪಾಕಿಸ್ತಾನ ಸದೆಬಡಿದ ಅಮೇರಿಕಾ

ಸಮಗ್ರ ನ್ಯೂಸ್: ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಹಾಗೂ ಅಮೆರಿಕ ನಡುವಿನ ರಣರೋಚಕ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡ ಸೂಪರ್​ ಓವರ್​ನಲ್ಲಿ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Ad Widget . Ad Widget .

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು. ಗೆಲುವಿಗೆ 160 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಅಮೆರಿಕ ಕೂಡ 20 ಓವರ್​​ಗಳಲ್ಲಿ 3 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು. ಹೀಗಾಗಿ ಪಂದ್ಯ ಸೂಪರ್​ ಓವರ್​ನತ್ತ ಸಾಗಿತು. ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಮೆರಿಕ ತಂಡ 19 ರನ್ ಕಲೆಹಾಕಿತು.

Ad Widget . Ad Widget .

ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ 1 ವಿಕೆಟ್ ಕಳೆದುಕೊಂಡು 13 ರನ್​ಗಳನಷ್ಟೇ ಕಲೆಹಾಕಲು ಶಕ್ತವಾಗಿ 5 ರನ್​​ಗಳಿಂದ ಸೋಲೊಪ್ಪಿಕೊಂಡಿತು.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಬಂದ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೂವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು 5 ಓವರ್‌ಗಳೊಳಗೆ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ತಂಡ 5 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಕೇವಲ 26 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಮೊದಲ 10 ಓವರ್​ಗಳವರೆಗೂ ಪಂದ್ಯದಲ್ಲಿ ಅಮೆರಿಕ ತಂಡ ಹಿಡಿತ ಸಾಧಿಸಿತ್ತು. ಆದರೆ ಆ ಬಳಿಕ ನಾಯಕ ಬಾಬರ್ ಆಝಂ ಹಾಗೂ ಶಾದಾಬ್ ಖಾನ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಈ ವೇಳೆ ಬಾಬರ್ 43 ರನ್​ಗಳ ಇನ್ನಿಂಗ್ಸ್ ಆಡಿದರೆ, ಶಾದಾಬ್ 40 ರನ್​ಗಳ ಕಾಣಿಕೆ ನೀಡಿದರು. ಕೊನೆಯಲ್ಲಿ ಶಾಹೀನ್ ಆಫ್ರಿದಿ 23 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಹೀಗಾಗಿ ಪಾಕ್ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು.

ಇದಾದ ಬಳಿಕ ಗುರಿ ಬೆನ್ನತ್ತಿದ ಅಮೆರಿಕ ತಂಡ ಅಮೋಘ ಆರಂಭ ಪಡೆದುಕೊಂಡಿತು. ತಂಡ 5 ಓವರ್‌ಗಳವರೆಗೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 36 ರನ್ ಕಲೆಹಾಕಿತು. ಆ ನಂತರ ಆರಂಭಿಕ ಸ್ಟೀವನ್ ಟೇಲರ್ 12 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಆ ಬಳಿಕ ಒಂದಾದ ನಾಯಕ ಮೊನಾಂಕ್ ಪಟೇಲ್ ಮತ್ತು ಆಂಡ್ರೀಸ್ ಗೂಸ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಇಬ್ಬರು ಒಟ್ಟಾಗಿ 68 ರನ್​ಗಳ ಜೊತೆಯಾಟ ಕಟ್ಟಿದರು. ಈ ಹಂತದಲ್ಲಿ ಆಂಡ್ರೀಸ್ ಗೂಸ್ 35 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಇವರು ಔಟಾದ ಬೆನ್ನಲ್ಲೇ ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ನಾಯಕ ಮೊನಾಂಕ್ ಪಟೇಲ್ ಕೂಡ ಔಟಾದರು. ಸುಲಭವಾಗಿ ಗುರಿ ಬೆನ್ನಟ್ಟುವಂತೆ ತೊರುತ್ತಿದ್ದ ಅಮೆರಿಕ ತಂಡ, ಇಲ್ಲಿಂದ ಸೋಲಿನ ಸುಳಿಯತ್ತ ಸಾಗಿತು. ಇದಕ್ಕೆ ಕೊನೆಯಲ್ಲಿ ಪಾಕ್ ವೇಗಿಗಳ ಕರಾರುವಕ್ಕಾದ ದಾಳಿಯೂ ಕಾರಣವಾಗಿತ್ತು.

Leave a Comment

Your email address will not be published. Required fields are marked *