Ad Widget .

ಸುಬ್ರಹ್ಮಣ್ಯ: ಕಾಂಗ್ರೆಸ್ ಮತ್ತು ಮತದಾರರ ಕುರಿತು ಅವಹೇಳನಕಾರಿ ಸ್ಟೇಟಸ್|‌ಠಾಣೆ ಮೆಟ್ಟಿಲೇರಿತು ಪ್ರಕರಣ

ಸಮಗ್ರ ನ್ಯೂಸ್: ಕಾಂಗ್ರೆಸ್‌ ಪಕ್ಷ ಹಾಗೂ ಕಾಂಗ್ರೆಸ್‌ ಮತದಾರರ ಬಗ್ಗೆ ವ್ಯಕ್ತಿಯೋರ್ವ ಅವಹೇಳನಕಾರಿ ಸ್ಟೇಟಸ್‌ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಲೇರಿದ ಘಟನೆ ಜೂ. 5ರಂದು ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಪಂಜದಲ್ಲಿ ನಡೆದಿದೆ.

Ad Widget . Ad Widget .

ಪಂಜದಲ್ಲಿ ಅಂಗಡಿ ವ್ಯವಹಾರ ನಡೆಸುತ್ತಿರುವ ವ್ಯಕ್ತಿಯೋರ್ವರು ಕಾಂಗ್ರೆಸ್‌ ಪಕ್ಷದ ಬಗ್ಗೆ ಹಾಗೂ ಕಾಂಗ್ರೆಸ್‌ ಮತದಾರರ ಬಗ್ಗೆ ಅವಹೇಳನಕಾರಿ ಸ್ಟೇಟಸ್‌ ಹಾಕಿದ್ದಾರೆಂಬ ಆರೋಪ ವ್ಯಕ್ತವಾಗಿದ್ದು, ಇದನ್ನು ಗಮನಿಸಿದ ಅಲ್ಲಿನ ಕೆಲವು ಕಾಂಗ್ರೆಸ್‌ ಮುಖಂಡರು ಅವಹೇಳನಕಾರಿ ಸ್ಟೇಟಸ್‌ ಹಾಕಿದ ವ್ಯಕ್ತಿಯ ವಿರುದ್ಧ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

Ad Widget . Ad Widget .

ಪೊಲೀಸರು ಆರೋಪಿತ ವ್ಯಕ್ತಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು, ಈ ವೇಳೆ ವ್ಯಕ್ತಿ ತಪ್ಪೊಪ್ಪಿಕೊಂಡು ಕ್ಷಮೆ ಯಾಚಿಸಿದ್ದು, ಬಳಿಕ ಠಾಣೆಯ ಹೊರಗೆ ಇತ್ತಂಡದವರು ಮಾತುಕತೆ ನಡೆಸಿದ್ದರು. ಈ ವೇಳೆ ಆರೋಪಿತ ವ್ಯಕ್ತಿ ಕೇಸ್‌ ಹಿಂಪಡೆಯುವಂತೆ ವಿನಂತಿಸಿದ್ದು, ಈ ವೇಳೆ ಆರೋಪಿತ ವ್ಯಕ್ತಿ 3 ದಿನಗಳ ಕಾಲ ಅಂಗಡಿ ಮುಚ್ಚಬೇಕೆಂದು ದೂರು ನೀಡಿದ ತಂಡ ಷರತ್ತು ವಿಧಿಸಿತ್ತು. ಇದಕ್ಕೆ ವ್ಯಕ್ತಿ ಒಪ್ಪಿದ್ದ ಕಾರಣ ಪ್ರಕರಣ ಹಿಂತೆಗೆದು ಇತ್ಯರ್ಥಪಡಿಸಲಾಗಿತ್ತು.

ಪ್ರಕರಣ ಠಾಣೆ ಮೆಟ್ಟಲೇರಿ ಬಳಿಕ ನಡೆದ ಮಾತುಕತೆಯಂತೆ ಆರೋಪಿತ ವ್ಯಕ್ತಿ ಜೂ. 6ರಂದು ತನ್ನ ಅಂಗಡಿ ತೆರೆದಿರಲಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಬಿಜೆಪಿ ಮುಖಂಡರು, ಅಂಗಡಿ ಮಾಲಕರನ್ನು ಸಂಪರ್ಕಿಸಿ ಅಂಗಡಿ ತೆರೆಯುವಂತೆ ಸೂಚಿಸಿದ್ದರು. ಅದರಂತೆ ಆ ವ್ಯಕ್ತಿ ಅಂಗಡಿಯನ್ನು ತೆರೆದಿದ್ದಾರೆ.

ಅವಹೇಳನಕಾರಿ ಸ್ಟೇಟಸ್‌ ಹಾಕಿರುವುದಕ್ಕೆ ತಪ್ಪೊಪ್ಪಿಕೊಂಡಿದ್ದು, ಅಂಗಡಿ ಬಂದ್‌ ಮಾಡುತ್ತೇನೆ ಎಂದು ಮುಚ್ಚಳಿಕೆ ಬರೆದುಕೊಟ್ಟಿರಲಿಲ್ಲ. ಕಾಂಗ್ರೆಸ್‌ನವರು ಹೇಳುತ್ತಾರೆ ಎಂದು ಅಂಗಡಿ ಮುಚ್ಚಲು ಸಾಧ್ಯವಿಲ್ಲ, ನಾವು ತಿಳಿಸಿದಂತೆ ಇದೀಗ ಅಂಗಡಿ ತೆರೆದಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *