Ad Widget .

ಚುನಾವಣೆಯಲ್ಲಿ ಹಿನ್ನಡೆ/ ಸಚಿವರ ವಿರುದ್ಧ ಗರಂ ಆದ ರಾಹುಲ್

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಯಲ್ಲಿ ಗೆದ್ದ ಕರ್ನಾಟಕದ ನೂತನ ಸಂಸದರು ಮತ್ತು ಪರಾಜಿತ ಅಭ್ಯರ್ಥಿಗಳ ಜೊತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತುಕತೆ ನಡೆಸಿದ್ದು, ಚುನಾವಣಾ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾದ ಸಚಿವರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

Ad Widget . Ad Widget .

ಇಂದು ಬೆಂಗಳೂರಿನ ಸ್ಟೀನ್ಸ್ ರಸ್ತೆಯ ಭಾರತ್ ಜೋಡೋ ಭವನದಲ್ಲಿ ನಡೆದ ಸಭೆಯಲ್ಲಿಗೆದ್ದವರಿಗೆ ಅಭಿನಂದನೆ ಹಾಗೂ ಸೋತ ಅಭ್ಯರ್ಥಿಗಳಿಗೆ ರಾಹುಲ್ ಗಾಂಧಿ ಧೈರ್ಯ ಹೇಳಿದರು. ಲೀಡ್ ಕಡಿಮೆ ಕೊಟ್ಟ ಸಚಿವರ ಬಗ್ಗೆ ರಣದೀಪ್ ಸುರ್ಜೇವಾಲಾ ಮಾಹಿತಿ ನೀಡಿದ್ದಾರೆ. 18 ಸಚಿವರು ಲೀಡ್ ಕೊಡಿಸುವಲ್ಲಿ ವಿಫಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ತಮ್ಮ ಜಿಲ್ಲೆಯಲ್ಲಿ ಅಭ್ಯರ್ಥಿ ಗೆಲ್ಲಿಸುವುದರಲ್ಲೂ ವಿಫಲರಾಗಿದ್ದಕ್ಕೆ ಸಚಿವರ ವಿರುದ್ಧ ರಾಹುಲ್ ಗಾಂಧಿ ಅಸಮಾಧಾನ ಹೊರಹಾಕಿದ್ದಾರೆ.

Ad Widget . Ad Widget .

ಇದೇ ವೇಳೆ ಗೆದ್ದವರಿಗೆ ಕ್ಷೇತ್ರದಲ್ಲಿ ಹೆಚ್ಚು ಸಮಯ ಕಳೆಯಿರಿ. ಬೆಂಗಳೂರು, ದೆಹಲಿಯಲ್ಲೇ ಇರಬೇಡಿ. ಕ್ಷೇತ್ರದ ಜನರ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಳ್ಳಿ. ನಾವು ನಿಮ್ಮ ಜತೆಗೆ ಇದ್ದೇವೆ. ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಿ. ಕಾರ್ಯಕರ್ತರ ವಿಶ್ವಾಸಗಳಿಸಿ, ಅದರಿಂದ ಮುಂದೆ ನಿಮಗೂ, ಪಕ್ಷಕ್ಕೂ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *