Ad Widget .

ಉತ್ತರಾಖಂಡ ಚಾರಣಕ್ಕೆ ತೆರಳಿದ 9 ಮಂದಿ ಸಾವು

ಸಮಗ್ರ ನ್ಯೂಸ್: ಉತ್ತರಾಖಂಡದ ಉತ್ತರಕಾಶಿಯ ಸಹಸ್ತ್ರ ತಾಲ್ಗೆ ಚಾರಣಕ್ಕೆ ತೆರಳಿದ್ದ 22 ಸದಸ್ಯರ ತಂಡದ ಪೈಕಿ ಕರ್ನಾಟಕದವರು ಸೇರಿ 9 ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಸ್ಥಳೀಯ ಮಾರ್ಗದರ್ಶಿಗಳನ್ನು ಒಳಗೊಂಡ ತಂಡವು ಮೇ 29 ರಂದು ಸಾಹಸವನ್ನು ಪ್ರಾರಂಭಿಸಿತು, ಜೂನ್ 7 ರೊಳಗೆ ವಾಪಸ್ ಆಗಲು ನಿರ್ಧರಿಸಿತ್ತು.

Ad Widget . Ad Widget .

ಮೃತರನ್ನು ಬೆಂಗಳೂರಿನ ಸುಜಾತ (52), ಪದ್ಮಿನಿ ಹೆಗಡೆ (35), ಚಿತ್ರಾ (48), ಸಿಂಧು (45), ವೆಂಕಟೇಶ್ ಪ್ರಸಾದ್ (52), ಅನಿತಾ (61), ಆಶಾ ಸುಧಾಕರ (72), ಪದ್ಮನಾಭನ್ ಕೆಪಿಎಸ್ (50) ವಿನಾಯಕ್ ಎಂದು ಗುರುತಿಸಲಾಗಿದೆ. ಸೌಮ್ಯಾ, ವಿನಯ, ಶಿವಜ್ಯೋತಿ, ಸುಧಾಕರ್, ಸ್ಮೃತಿ, ಸೀನಾ ಸೇರಿ ಹಲವರನ್ನು ರಕ್ಷಣೆ ಮಾಡಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *