Ad Widget .

ಅಭಿಷೇಕ್ ಹಾಗೂ ಅವಿವಾ ದಾಂಪತ್ಯಕ್ಕೆ ಮೊದಲ ವಾರ್ಷಿಕೋತ್ಸವದ ಸಂಭ್ರಮ

ಸಮಗ್ರ ನ್ಯೂಸ್: ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದ್ದಪ್ಪ ದಾಂಪತ್ಯಕ್ಕೆ ಇದೀಗ ಒಂದು ವರ್ಷ ತುಂಬಿದೆ. 2023ರ ಜೂನ್ 5ರಂದು ಈ ಜೋಡಿ ವಿವಾಹ ಆಯಿತು. ಸೆಲೆಬ್ರಿಟಿಗಳು ಇವರ ವಿವಾಹದಲ್ಲಿ ಭಾಗವಹಿಸಿದ್ದರು.

Ad Widget . Ad Widget .

ಸುಮಲತಾ ಅಂಬರಿಶ್‌ ಅವರು ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.  ಅದರಲ್ಲಿ ತಮ್ಮ ಮಗ ಮತ್ತು ಸೊಸೆಯ ಸುಂದರ ಫೋಟೋಗಳೊಂದಿಗೆ ವಿಶ್‌ ಮಾಡಿದ್ದಾರೆ. 

Ad Widget . Ad Widget .

“ನನ್ನ ಪ್ರೀತಿಯ ಅಬಿದೊ ಮತ್ತು ಅವಿವಾಗೆ ಮೊದಲ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ನಿಮ್ಮ ಪ್ರೀತಿ ಇನ್ನಷ್ಟು ಉತ್ತಮವಾಗಲಿ. ಇನ್ನಷ್ಟು ಒಬ್ಬರನ್ನೊಬ್ಬರನ್ನು ಅರ್ಥ ಮಾಡಿಕೊಳ್ಳಿ. ನಿಮಗೆ ಪ್ರೀತಿಯ ಅಪ್ಪುಗೆ ಮತ್ತು ಆಶೀರ್ವಾದ” ಎಂದು ಸುಮಲತಾ ಅಂಬರೀಶ್‌ ವಿಶ್‌ ಮಾಡಿದ್ದಾರೆ.

ಅಭಿಷೇಕ್‌ ಅಂಬರೀಶ್‌ ಮತ್ತು ಅವಿವಾ ಬಿದ್ದಪ್ಪ ಅವರು ಜೂನ್‌ 5, 2023ರಂದು ವಿವಾಹವಾಗಿದ್ದರು. ಜೂನ್‌ 7ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ರಿಸೆಪ್ಷನ್‌ ನಡೆದಿತ್ತು. ಹಲವು ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು.  ಇದೀಗ ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ.

Leave a Comment

Your email address will not be published. Required fields are marked *