ಇದು ಬಿಜೆಪಿಯ ನೈತಿಕ ಸೋಲು/ ಮೋದಿ‌ ವಿರುದ್ಧ ಜನಾದೇಶ ಎಂದ ಖರ್ಗೆ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಯ ಫಲಿತಾಂಶ ಜನತೆಯ ಫಲಿತಾಂಶವಾಗಿದ್ದು ಇದು ಮೋದಿಯವರ ವಿರುದ್ಧ ಜನಾದೇಶ ಎಂಬುದು ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Ad Widget ... ..

ಇದು ಮೋದಿಯವರ ನೈತಿಕ ಮತ್ತು ರಾಜಕೀಯ ಸೋಲು. ಇದು ಜನರ ಗೆಲುವು, ಪ್ರಜಾಪ್ರಭುತ್ವದ ಗೆಲುವು ಎಂದು ದೆಹಲಿಯಲ್ಲಿ ಹೇಳಿಕೆ ನೀಡಿದ್ದಾರೆ.

Ad Widget

ಇದು ಮೋದಿ, ಜನರ ನಡುವಿನ ಯುದ್ಧ ಎಂದು ನಾವು ಚುನಾವಣೆಗೂ ಮೊದಲೇ ಹೇಳಿದ್ದೆವು. ಈ ಸಲ ಜನ ಯಾರಿಗೂ ಪೂರ್ಣ ಬಹುಮತ ನೀಡಿಲ್ಲ. ಒಬ್ಬ ವ್ಯಕ್ತಿಯ ಮುಖ ಇಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸಿದೆ. ಅದನ್ನು ಜನರು ಸೋಲಿಸಿದ್ದಾರೆ. ಇದು ಬಿಜೆಪಿಯ ನೈತಿಕ ಸೋಲು ಎಂದು ಖರ್ಗೆ ಹೇಳಿದ್ದಾರೆ.

Leave a Comment

Your email address will not be published. Required fields are marked *