ಸಮಗ್ರ ನ್ಯೂಸ್: 2024ರ ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಎನ್‌ಡಿಎ ಬಹುಮತ ಪಡೆದರೂ ಇಂಡಿಯಾ ಒಕ್ಕೂಟದ ಅತ್ಯುತ್ತಮ ಸಾಧನೆ ಮಾಡಿದೆ. ಈ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ಮಾಡಿರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಹಂಕಾರ ಪಂಕ್ಚರ್ ಮಾಡಿದ್ದಕ್ಕೆ ಧನ್ಯವಾದಗಳು ಎಂದು ನಟ ಬರೆದುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಯಕ್ಟೀವ್ ಆಗಿರುವ ಪ್ರಕಾಶ್ ರಾಜ್ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. 400 ದಾಟಲು (ಚಾರ್ ಸೌ ಪಾರ್) ಬಿಜೆಪಿಗೆ ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿರುವುದು ಈ ವಿಡಿಯೋದಲ್ಲಿದೆ. ಅದರ ಜೊತೆಗೆ ಪ್ರಕಾಶ್ ರಾಜ್ ಅವರು ದೇಶದ ಜನರಿಗೆ ಚುನಾವಣಾ ಫಲಿತಾಂಶದ ಬಗ್ಗೆ ತಮ್ಮ ಮೊದಲ ಪ್ರತಿಕ್ರಿಯೆ ತಿಳಿಸಿದ್ದಾರೆ.
ಚಕ್ರವರ್ತಿ ಬೆತ್ತಲಾಗಿದ್ದಾನೆ. ಅವನು ಈಗ ಅನಿವಾರ್ಯವಾಗಿ ಬೇರೊಬ್ಬನ ಬೆಂಬಲದೊಂದಿಗೆ ಮುನ್ನಡೆಯಬೇಕಿದೆ ಎಂದು ಪ್ರಕಾಶ್ ರಾಜ್ ಬರೆದುಕೊಂಡಿದ್ದಾರೆ. ಇಂಡಿಯಾ ಮತ್ತು ಜವಾಬ್ದಾರಿಯುತ ನಾಗರಿಕ ಸಮಾಜಕ್ಕೆ ಧನ್ಯವಾದಗಳು. ಅಹಂಕಾರ ಪಂಕ್ಚರ್ ಮಾಡಿ ಅವರ ಸ್ಥಾನ ತೋರಿಸಿದ್ದಕ್ಕೆ ಥ್ಯಾಂಕ್ಯೂ ಎಂದಿದ್ದಾರೆ. ನಾನು ನಮ್ಮ ದೇಶಕ್ಕಾಗಿ ಚೆನ್ನಾಗಿ ಹೋರಾಡುತ್ತಿದ್ದೇವೆ. ನಾವು ಹೀಗೆ ಮುಂದುವರಿಯುತ್ತೇವೆ ಎಂದು ಪ್ರಕಾಶ್ ರಾಜ್ ಚುನಾವಣೆ ಫಲಿತಾಂಶದ ಬಳಿಕ ತಮ್ಮದೇ ಶೈಲಿಯಲ್ಲಿ ರಿಯಾಕ್ಟ್ ಮಾಡಿದ್ದಾರೆ. ನಟನ ಪೋಸ್ಟ್‌ಗೆ ಸಾಕಷ್ಟು ಮಂದಿ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.