ಲೋಕಸಭೆ ಚುನಾವಣೆ/ ತಮಿಳುನಾಡಿನಲ್ಲಿ ಮತ ಪ್ರಮಾಣ ಹೆಚ್ಚಿಸಿಕೊಂಡ ಬಿಜೆಪಿ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ 292 ಸ್ಥಾನಗಳನ್ನು ಗಳಿಸಿದ್ದು, ಇಂಡಿಯ ಬಣ 233 ಸ್ಥಾನಗಳನ್ನು ಗಳಿಸಿದೆ. ಇದರ ಜೊತೆಗೆ ದಕ್ಷಿಣ ಭಾರತದ ಕೇರಳದಲ್ಲಿ ಕೊನೆಗೂ ಖಾತೆ ತೆರೆಯಲು ಯಶಸ್ವಿಯಾಗಿರುವ ಬಿಜೆಪಿ 1 ಸೀಟು ಗೆದ್ದುಕೊಂಡಿದೆ. ಆದ್ರೆ ತಮಿಳುನಾಡಿನ ಮತದಾರರು ಕೈಹಿಡಿಯಲಿಲ್ಲವಾದರೂ ರಾಜ್ಯದಲ್ಲಿ ಬಿಜೆಪಿಗೆ ದೊರೆತ ಮತಗಳ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.

Ad Widget ... ..

ತಮಿಳುನಾಡಿನಲ್ಲಿ ಬಿಜೆಪಿಗೆ ಇದೇ ಮೊದಲ ಬಾರಿಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು ಮತದಾನ ಹಂಚಿಕೆಯಲ್ಲಿ ಸುಮಾರು 4 ಪಟ್ಟು ಹೆಚ್ಚಳ ದಾಖಲಿಸಿದೆ. ಕಳೆದ ಬಾರಿ ಶೇ. 3.57ರಷ್ಟಿದ್ದ ಮತ ಗಳಿಕೆಯ ಪ್ರಮಾಣ ಶೇ. 11.04ಕ್ಕೆ ತಲುಪಿದೆ. ಸದ್ಯ ಇದು ಬಿಜೆಪಿಗೆ ದೊರೆತ ಜನ ಬೆಂಬಲದ ಪ್ರತೀಕ ಎಂದೇ ವಿಶ್ಲೇಷಿಸಲಾಗುತ್ತಿದೆ.

Ad Widget

1967ರಿಂದ ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಸ್ಪರ್ಧೆ ನಡೆಯುತ್ತಿದೆ. ಚುನಾವಣೆ ಘೋಷಣೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ 10ಕ್ಕಿಂತ ಹೆಚ್ಚು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದರು. ಈ ಬಾರಿ ಬಿಜೆಪಿ 23 ಸೀಟುಗಳಲ್ಲಿ ಸ್ಪರ್ಧಿಸಿತ್ತು

Leave a Comment

Your email address will not be published. Required fields are marked *