ಹಾಸನದಲ್ಲಿ ರೌಡಿಶೀಟರ್ ಡೆಡ್ಲಿ ಮರ್ಡರ್…! ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ಸಮಗ್ರ ನ್ಯೂಸ್: ಹಾಸನದಲ್ಲಿ ಇಂದು ಬರ್ಬರ ಕೊಲೆಯೊಂದು ನಡೆದಿದೆ. ನಟೋರಿಯಸ್ ರೌಡಿ ರವಿ ಅಲಿಯಾಸ್ ಚೈಲ್ಡ್ ರವಿ (45) ಎಂಬಾತನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಈ ಘಟನೆ ಹಾಸನದ ಹೇಮಾವತಿನಗರದಲ್ಲಿ ನಡೆದಿದೆ. ಮಾರಕಾಸ್ತ್ರಗಳಿಂದ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

Ad Widget ... ..

ರೌಡಿ ರವಿ ಕುಡಿಯುವ ನೀರು ತೆಗೆದುಕೊಂಡು ಬೈಕ್‌ನಲ್ಲಿ ತೆರಳುತ್ತಿದ್ದಾಗ ಏಕಾಏಕಿ ದಾಳಿ ಮಾಡಿದ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ತೀವ್ರ ರಕ್ತ ಸ್ರಾವದಿಂದಾಗಿ ಆತ ಅಲ್ಲೇ ಮೃತಪಟ್ಟಿದ್ದಾನೆ. ಕೊಲೆಯಾದ ರವಿಯ ವಿರುದ್ಧ ಕೊಲೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳಿದ್ದವು. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ. ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದೂರು ದಾಖಲಿಸುತ್ತಿದ್ದಾರೆ

Ad Widget

Leave a Comment

Your email address will not be published. Required fields are marked *