ಮೆಕ್ಸಿಕೋ ದೇಶದ 200 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ
ಮೆಕ್ಸಿಕೋ ಅಧ್ಯಕ್ಷೀಯ ಚುನಾವಣೆಯಲ್ಲಿ ಕೌಡಿಯಾ ಶೇನ್‌ಬಾಮ್ ಭಾರೀ ಅಂತರದಿಂದ ಜಯಗಳಿಸಿ ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದ್ದು, ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶೇನ್‌ಬಾಮ್ 58.3 ರಿಂದ 60.7 ಪ್ರತಿಶತದಷ್ಟು ಮತಗಳನ್ನು ಪಡೆದು ವಿಜಯವನ್ನು ಸಾಧಿಸಿದ್ದಾರೆ ಎಂದು ಮೆಕ್ಸಿಕೋದ ಚುನಾವಣಾ ಸಂಸ್ಥೆಯು ಘೋಷಿಸಿತು.
ನಾನು ಮೆಕ್ಸಿಕೋದ ಮೊದಲ ಮಹಿಳಾ ಅಧ್ಯಕ್ಷೆಯಾಗುತ್ತೇನೆ. ಮೆಕ್ಸಿಕೋ ಶಾಂತಿಯುತ ಚುನಾವಣೆಗಳೊಂದಿಗೆ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದು ನಾವು ತೋರಿಸಿದ್ದೇವೆ. ಇತರ ಸಂದರ್ಭಗಳಲ್ಲಿ ಹೇಳಿದಂತೆ, ನಾನು ಒಬ್ಬಂಟಿಯಾಗಿ ಬರುವುದಿಲ್ಲ. ನಮ್ಮ ತಾಲ್ನಾಡನ್ನು ನಮಗೆ ನೀಡಿದ ನಮ್ಮ ನಾಯಕಿಯರು, ನಮ್ಮ ತಾಯಂದಿರು, ನಮ್ಮ ಹೆಣ್ಣುಮಕ್ಕಳು ನಾವೆಲ್ಲರೂ ಒಟ್ಟಿಗೆ ಬಂದಿದ್ದೇವೆ’ ಎಂದು ಶೇನ್‌ಬಾಮ್ ಹೇಳಿದರು.
ವಿರೋಧ ಪಕ್ಷದ ಸೆನೆಟರ್ ಮತ್ತು ಟೆಕ್ ಉದ್ಯಮಿಯಾದ ಮಾಜಿ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಅವರ ಸ್ಥಾನವನ್ನು ಶೇನ್‌ಬಾಮ್ ಅಲಂಕರಿಸಿದರು.