Ad Widget .

ಮೈತ್ರಿಕೂಟದ ಜೊತೆ ಚರ್ಚಿಸದೇ ಜೆಡಿಯು, ಟಿಡಿಪಿ ಜೊತೆ ಮೈತ್ರಿಯಿಲ್ಲ – ರಾಹುಲ್ ಗಾಂಧಿ

ಸಮಗ್ರ ನ್ಯೂಸ್: ‘ಇಂಡಿಯಾ ಮೈತ್ರಿಕೂಟದ ಪಾಲುದಾರರೊಂದಿಗೆ ಮಾತನಾಡದೆ ಟಿಡಿಪಿ ಮತ್ತು ಜೆಡಿಯು ಜೊತೆಗಿನ ಮೈತ್ರಿ ಬಗ್ಗೆ ಉತ್ತರಿಸುವುದಿಲ್ಲ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

Ad Widget . Ad Widget .

ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ “ಸರ್ಕಾರ ರಚನೆಗೆ ಮುಂದಾಗುವಿರಾ?” ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, “ನಮ್ಮದು ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಪಕ್ಷ. ನಮ್ಮ ಪಾಲುದಾರರ ಜೊತೆ ಮಾತನಾಡದೇ ಈ ಪ್ರಶ್ನೆಗೆ ಉತ್ತರಿಸುವುದಿಲ್ಲ. ನಾಳೆ ನಮ್ಮ ಒಕ್ಕೂಟದ ಸಭೆ ಇದೆ. ಅಲ್ಲಿ ಎಲ್ಲರ ಅಭಿಪ್ರಾಯಗಳನ್ನು ಕೇಳಿ ಮುಂದಿನ ನಡೆಯ ಬಗ್ಗೆ ತಿಳಿಸುತ್ತೇವೆ” ಎಂದು ಹೇಳಿದ್ದಾರೆ.

Ad Widget . Ad Widget .

“ಈ ಚುನಾವಣೆಯಲ್ಲಿ ನಾವು ಬಿಜೆಪಿ ಮತ್ತು ಎನ್‌ಡಿಎ ಸರ್ಕಾರ ದುರುಪಯೋಗಪಡಿಸಿಕೊಂಡ ಸ್ವತಂತ್ರ ಸಂಸ್ಥೆಗಳ ವಿರುದ್ಧ ಹೋರಾಡಿದ್ದೇವೆ. ನಮ್ಮ ಬ್ಯಾಂಕ್‌ ಖಾತೆಗಳನ್ನು ದುರುಪಯೋಗ ಪಡಿಸಿಕೊಂಡರು. ನಮ್ಮ ಮೈತ್ರಿಕೂಟದ ಸದಸ್ಯರನ್ನು ಜೈಲಿಗಟ್ಟಿ ತೊಂದರೆ ನೀಡಿದರು. ಆದರೂ, ನಮಗೆ ಜನರ ಮೇಲೆ ನಮಗೆ ನಂಬಿಕೆಯಿತ್ತು. ಜನರು ಅದಕ್ಕೆಲ್ಲ ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದ್ದಾರೆ” ಎಂದಿದ್ದಾರೆ.

ಉತ್ತರಪ್ರದೇಶದ ಜನರು ಅಚ್ಚರಿಯ ಫಲಿತಾಂಶ ನೀಡಿದ್ದಾರೆ. ಭಾರತದ ರಾಜಕಾರಣದ ಗತಿಯನ್ನು ಗಮನಿಸಿ, ಉತ್ತರ ಪ್ರದೇಶವು ಸಂವಿಧಾನದ ರಕ್ಷಣೆ ಮಾಡಿದೆ. ನಿಮಗೆ ವಿಶೇಷ ಧನ್ಯವಾದಗಳು. ಉತ್ತರ ಪ್ರದೇಶದಂತೆಯೇ ಇತರ ಕೆಲವು ರಾಜ್ಯಗಳೂ ಉತ್ತಮ ಫಲಿತಾಂಶ ನೀಡಿವೆ. ಆದರೆ, ಉತ್ತರ ಪ್ರದೇಶದ ಜನರ ನಡೆ ಗಮನಾರ್ಹವಾದುದು” ಎಂದಿದ್ದಾರೆ.

Leave a Comment

Your email address will not be published. Required fields are marked *