Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಈ ವಾರ ದ್ವಾದಶ ರಾಶಿಗಳ ಗೋಚಾರಫಲ ಯಾವ ರೀತಿ ಇದೆ ನೋಡೋಣ ಬನ್ನಿ…

Ad Widget . Ad Widget .

ಮೇಷರಾಶಿ: ವೈಶಾಖ ಮಾಸದ ಅಂತ್ಯವೂ ಬಂದು 6ನೇ ತಾರಿಕೀನಂದು ಅಮಾವಾಸ್ಯೆಯಿಂದ ಜ್ಯೇಷ್ಠ ಮಾಸವು ಆರಂಭವಾಗಿ. ಜ್ಯೇಷ್ಠ ಮಾಸದಲ್ಲಿ ಗಂಗಾ ಸ್ನಾನ ಗಂಗೆ ಪೂಜೆ ಮಾಡಬೇಕೆಂದು ಶಾಸ್ತ್ರವು ಹೇಳುತ್ತದೆ. ಮೇಷ ರಾಶಿಯಲ್ಲಿ ಹುಟ್ಟಿ ಇದನ್ನು ಪಾಲಿಸಿ ತಮ್ಮ ಇಷ್ಟಾರ್ಥ ಸಾಧಿಸಿಕೊಳ್ಳಿ. ಗುರುವು 2ರಲ್ಲಿದ್ದು ಏಕಾದಶ ಶನಿ ಶುಭ ಸೂಚಕನಾಗಿದ್ದಾನೆ.

Ad Widget . Ad Widget .

ವೃಷಭ: ಆರನೇ ತಾರೀಕಿನ ಅಮಾವಾಸ್ಯೆ ಅತ್ಯಂತ ಶ್ರೇಷ್ಠವಾದದ್ದು ಹಾಗೂ ಅಂದು ಗ್ರಹಗಳಿಗೆಲ್ಲ ರಾಜನು ಈ ವರ್ಷದ ಮಂತ್ರಿಯಾದ ಶನೀಶ್ವರನಿಗೆ ಪೂಜೆ ಮಾಡಿ ತಿಲ ದಾನ ಕೊಟ್ಟು ತಿಲಾ ಹೋಮ ಮಾಡಿದರೆ ಒಳ್ಳೆಯ ಫಲವು ನಿಮ್ಮನ್ನು ಮುಂದೆ ಕೊಂಡೊಯ್ಯುತ್ತದೆ. ವಿಚಾರ ವಿಷಯದಲ್ಲಿ ಆತುರ ಬೇಡ. ಯಾವುದೇ ಕೆಲಸ ಮಾಡುವ ಮೊದಲು ದೀರ್ಘವಾಗಿ ಆಲೋಚಿಸಿ ಮುಂದೆ ಸಾಗಿರಿ.

ಮಿಥುನ: ದಾನ ಧರ್ಮವು ಮಾಡಿದ ಪುಣ್ಯಗಳು ಯಾವಾಗಲೂ ಮನುಷ್ಯನನ್ನು ಹಿಂಬಾಲಿಸಿ ಬರುತ್ತವೆ. ಗ್ರಹಗಳು ಸುಸ್ಥಿತಿಯಲ್ಲಿ ಇಲ್ಲದಿರುವಾಗ ಮನುಷ್ಯ ಮಾಡಿದ ಪುಣ್ಯ ಅವನಿಗೆ ದಾರಿ ತೋರಿಸುತ್ತದೆ. ಅದಕ್ಕೆ ಹಿರಿಯರು ಕಾಲಘಟ್ಟ ದಾನ ಧರ್ಮ ಮಾಡಿ ದೇವರನ್ನು ಒಲಿಸಿಕೊಳ್ಳಿ ಎಂಬ ಮಾತನ್ನು ಹೇಳಿದ್ದಾರೆ. ಪುಣ್ಯ ನಿಮ್ಮನ್ನು ಕಾಯಲಿ. ಗ್ರಹಗಳು ಶುಭ ಸ್ಥಾನಕ್ಕೆ ಬರುವವರೆಗೂ ದೈವ ಚಿಂತನೆ ಮಾಡಿರಿ.

ಕಟಕ: ಈ ರಾಶಿಯವರು ಕಲ್ಮಶ ಇಲ್ಲದವರು, ಯಾರಿಗೂ ಕೆಟ್ಟದ್ದು ಬಯಸುವ ಗುಣ ಇಲ್ಲದವರು. ಹರಿವ ನೀರು ಎಷ್ಟು ಶುದ್ಧವಾಗಿರುತ್ತದೆಯೋ ಚಂದ್ರ ಅಧಿಪತ್ಯದಿಂದ ನೀವು ಅಷ್ಟೇ ಶುದ್ಧರಾಗಿರು ತ್ತೀರಿ. ಮಾಡುವ ಕಾರ್ಯಗಳು ಶುಭವನ್ನು ಕೊಡುತ್ತದೆ. ಆರೋಗ್ಯ ಸಂತೋಷ ಸುಖ ಎಲ್ಲವೂ ತುಂಬಿದ ರಾಶಿ ಇದು.

ಸಿಂಹ: ಸಿಂಹವು ಕಾಡಿನ ರಾಜ. ಬೇಕಾದ ಆಹಾರವನ್ನು ಹುಡುಕಿಕೊಂಡು ಹೋಗಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಬುದ್ಧಿ ಬಲವು ಸಿಂಹ ರಾಶಿಯವರಿಗೆ ಜನ್ಮತಃ ಬಂದಿರುವುದರಿಂದ ಅವರು ನಿರಂತರ ದೇವತಾ ಉಪಾಸನೆ ಮಾಡಿದರೆ ಕೇಡು ಸಂಭವಿಸುವುದಿಲ್ಲ. ಸೂರ್ಯನಾರಾಯಣನ ಪ್ರಾರ್ಥನೆ ಮಾಡಿ, ಕೇತುವಿಗೆ ಗಣಪತಿಯನ್ನು ಪೂಜಿಸಿ.

ಕನ್ಯಾ: ರಸ್ತೆ ಅಡ್ಡಾದಿಡ್ಡಿ ಇದ್ದರೂ ಕಷ್ಟ. ಶನಿ ಗುರು ಸಂಯೋಜನೆ ಯಿಂದ ಎಲ್ಲವೂ ರಾಜ ಮಾರ್ಗವಾಗಿ ಶುಭವು ಹಾಗೂ ಶ್ರೇಯಸ್ಸು ಉಂಟಾಗುವ ದಾರಿ ಹಾಕಿಕೊಟ್ಟಿದ್ದಾನೆ. ಇದು ಸುಸಮಯವು, ನಿಮ್ಮ ಕುಲದೇವರನ್ನು ಪ್ರಾರ್ಥನೆ ಮಾಡಿ.

ತುಲಾ: ವ್ಯಾಪಾರ ಮಾಡುವವರು ತಕ್ಕಡಿ ಹಿಂದೆ ಮುಂದೆ ಮಾಡಿ ಮೋಸ ಮಾಡಬಹುದು. ತಕ್ಕಡಿಯು ನ್ಯಾಯ ಅನ್ಯಾಯದ ಸಂಕೇತ. ನೀವು ನ್ಯಾಯ ಬದ್ಧವಾಗಿದ್ದರೆ ಪಂಚಮ ಶನಿ ಅಷ್ಟಮ ಗುರು ಯಾವ ತೊಂದರೆಯನ್ನೂ ಮಾಡಲಾರ. ದುರ್ಗಾದೇವಿಯನ್ನು ದರ್ಶಿಸಿ ದುರ್ಗಾಷ್ಟಕವನ್ನು ಪಠಿಸಿ.

ವೃಶ್ಚಿಕ: ಒಂದು ಕಾಲಘಟ್ಟದಲ್ಲಿ ಕೆಲವೊಂದು ಮನುಷ್ಯರಿಂದ ಆತಂಕ-ಅಡ್ಡಿ ಉಂಟಾಗುತ್ತದೆ. ಅದು ನಮ್ಮ ಮುಂದಿನ ಶ್ರೇಯಸ್ಸಿಗಾಗಿ ಎಚ್ಚರಿಕೆ ಗಂಟೆ ಎಂದು ತಿಳಿದು ಸಜ್ಜನರನ್ನು ಆರಿಸಿ ಅವರ ಒಳ್ಳೆಯ ಸಹವಾಸದಿಂದ ಅವರ ಜೊತೆ ಮುಂದೆ ಸಾಗಿದರೆ ಧನ ಕನಕ ವಸ್ತು ಸಿಗುತ್ತದೆ. ಯಾವುದೇ ಕಾರಣಕ್ಕೂ ಯಾವ ಕೆಲಸದಲ್ಲೂ ನಿಮ್ಮ ಸಹಿ ಮುದ್ರೆ ಮಾಡುವ ಮೊದಲು ಯೋಚಿಸಿ ಮುನ್ನಡೆಯಿರಿ.

ಧನಸ್ಸು: ಗುರುಬಲ ಇಲ್ಲ ಎಂಬುದು ಗೊತ್ತಿದೆ, ಆದರೆ ಗುರು ಮನೆಯಲ್ಲಿ ಜನಿಸಿದ ನೀವು ಗುರುವಿನ ಆಶ್ರಯದಲ್ಲಿ ಇರುತ್ತೀರಿ. ನಿತ್ಯ ಗುರುಸ್ಮರಣೆ ಯಿಂದ ನೀವು ನಿಮ್ಮ ಗುರುಗಳಿಗೆ ಮಾಡಿದ ವಿಶೇಷ ಸೇವೆಗಾಗಿ ಲಾಭ ಯಶಸ್ಸು ಕೆಲಸದಲ್ಲಿ ಜಯ ದೊರಕುವುದು. ಅತಿಯಾದ ಪ್ರವಾಸ ಅತಿಯಾದ ಆಯಾಸವನ್ನು ತಂದು ಕೊಳ್ಳದೆ ದೇಹಾಭಿಮಾನದಿಂದ ನೀವು ಮುಂದೆ ಸಾಗಬೇಕು.

ಮಕರ: ವೃಷಭದಲ್ಲಿ ಗುರು ಸೂರ್ಯನೊಂದಿಗೆ ಅಂಗಾರಕನು ಒಟ್ಟಿಗೆ ಇದ್ದು ನಿಮ್ಮನ್ನು ನಡೆಸುತ್ತಾನೆ. ಗ್ರಹಬಲವು ಅನಂತವಾಗಿ ಇರುವುದರಿಂದ ಜಯ ನಿಮ್ಮದಾಗುತ್ತದೆ. ನೆನೆಸಿದ ಕಾರ್ಯ ನಿಮ್ಮ ಯೋಜನೆಯಂತೆ ನಡೆಯುತ್ತದೆ. ನಿಮ್ಮ ಕೆಲಸದ ಪಟ್ಟಿಯನ್ನು ಮಾಡಿ. ನಿಮಗೆ ಈ ಸಮಯಕ್ಕೆ ಉಪಯೋಗವಾಗುವ ಕೆಲಸಕ್ಕೆ ಒತ್ತಾಸೆ ಕೊಟ್ಟು ಅದರಂತೆ ಕೆಲಸದಲ್ಲಿ ಮುಂದೆ ಸಾಗಿ.

ಕುಂಭ: ಕುಂಭ ರಾಶಿಗೆ ಇನ್ನು ಜನ್ಮಶನಿಯ ಸಂಪರ್ಕದಲ್ಲಿ ಇದ್ದು ಮನಸ್ಸು ಅಸ್ಥಿರವಾಗಿ ಹೊಯ್ದಾಟದಲ್ಲಿ ಇರುತ್ತದೆ. ತೂಗುಯ್ಯಾಲೆ ಮೇಲೆ ಕೂತು ಉಯ್ಯಾಲೆ ಆಡಿದ ನಂತರ ಸ್ವಲ್ಪ ಹೊತ್ತು ತಲೆಯು ಸ್ಥಿಮಿತದಲ್ಲಿರುವುದಿಲ್ಲ. ಹಾಗೆಯೇ ನೀವು ಏನು ಮಾಡಬೇಕೆಂದು ಅರಿತು ವಿವೇಚನೆಯಿಂದ ಕೆಲಸ ಮಾಡಿ. 2025 ಇಸವಿಯವರೆಗೂ ನಡೆ-ನುಡಿಯಲ್ಲಿ ಶಾಂತತೆ ಮನೆ ಮಾಡಲಿ.

ಮೀನ: ಮೀನ ರಾಶ್ಯಾಧಿಪತಿ ಗುರು ತೃತೀಯದಲ್ಲಿ ಶುಕ್ರನೊಂದಿಗೆ ಇದ್ದು ರವಿಯು ಅಲ್ಲೇ ಇದ್ದರೂ ಜೂ.12ರವರೆಗೂ ನಿಮ್ಮ ಕೆಲಸಗಳು ತೃಪ್ತಿಕರವಾಗಿ ನಡೆದು ಸಮಸ್ಯೆಗಳಿಂದ ಹೊರಬರುತ್ತೀರಿ. ಕಷ್ಟಕ್ಕೆ ಹೆದರಬಾರದು, ಬಂದದ್ದನ್ನು ಎದುರಿಸಬೇಕು. ಆಯಾ ಕಾಲ ದಾಟಲು ದೇವರೇ ನಿಮಗೆ ಶಕ್ತಿ ಕೊಟ್ಟು ನಿಮ್ಮನ್ನು ನಡೆಸುತ್ತಾನೆ.

Leave a Comment

Your email address will not be published. Required fields are marked *