ಸುಳ್ಯ: ಕೋಳಿ ಗೂಡಲ್ಲಿದ್ದ ನಾಗರ ಕಡಿದು ವೃದ್ದೆ ಸಾವು

ಸಮಗ್ರ ನ್ಯೂಸ್: ಮನೆಯ ಸಮೀಪ ಕೊಟ್ಟಿಗೆಯ ಸುತ್ತ ಸ್ವಚ್ಚಗೊಳಿಸುವ ಸಂದರ್ಭ ಕೋಳಿ ಗೂಡು(ಕಾಪು) ವನ್ನು ಪರಿಶೀಲಿಸಲು ವೃದ್ದೆಯೊಬ್ಬರು ಕೈ ಹಾಕಿದಾಗ ನಾಗರ ಹಾವು ಕಡಿದು ಸಾವನ್ನಪ್ಪಿದ ಘಟನೆ ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕದಲ್ಲಿ ಸಂಭವಿಸಿದೆ. ಮೃತರನ್ನು ಹರಿಹರ ಪಲ್ಲತ್ತಡ್ಕ ಗ್ರಾಮದ ಕಲ್ಲೇಮಠ ನಿವಾಸಿ ದೇವಮ್ಮ(67) ಎಂದು ಗುರುತಿಸಲಾಗಿದೆ.

Ad Widget ... ..

ಕೈಗೆ ನಾಗರ ಹಾವು ಕಡಿದಿರುವುದು ಗೊತ್ತಾಗಿದ್ದು ತಕ್ಷಣವೇ ಅವರನ್ನು ಹಳ್ಳಿ ಮದ್ದಿಗೆ ಕರೆದೊಯ್ದು ಅಲ್ಲಿಂದ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯೆ ವಿಷವೇರಿ ಕೊನೆಯುಸಿರೆಳೆದರೆನ್ನಲಾಗಿದೆ.

Ad Widget

Leave a Comment

Your email address will not be published. Required fields are marked *