ಸಮಗ್ರ ನ್ಯೂಸ್: ಕಳೆದ ಒಂದು ವಾರದ ಬಳಿಕ ಇದೀಗ ಬೆಂಗಳೂರಿಗೆ ವರುಣನ ಸಿಂಚನವಾಗಿದೆ. ಹೌದು ವೀಕೆಂಡ್ ಮೂಡ್ನಲ್ಲಿ ಇದ್ದ ಜನರಿಗೆ ಇಂದು ಸಂಜೆಯಿಂದ ಮಳೆಯ ಆಗಮನ ಶಾಕ್ ಕೊಟ್ಟಿದೆ. ಬೆಂಗಳೂರಿನ ಯಶವಂತಪುರ, ಕೆಂಗೇರಿ, ನಾಗರಬಾವಿ, ವಸಂತನಗರ, ಶಾಂತಿ ನಗರ, ಹೆಬ್ಬಾಳ, ಸದಾಶಿವನಗರ, ರಾಜಾಜಿನಗರ, ವಿಜಯನಗರ, ಬನಶಂಕರಿ, ಮೆಜೆಸ್ಟಿಕ್, ಸಿಟಿ ಮಾರ್ಕೆಟ್ ಸುತ್ತ ಮುತ್ತ ಮಳೆ ಆರ್ಭಟ ಜೋರಾಗಿದೆ. ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ.
ಆದರೆ ಮಳೆ ಹೊಡೆತ್ತಕ್ಕೆ ಸಿಲಿಕಾನ್ ಸಿಟಿ ನಲುಗಿಹೋಗಿದೆ. ಮಳೆ ನೀರು ರಸ್ತೆಯಲ್ಲಿ ಹರಿದು ವಾಹನ ಸವಾರರಂತೂ ಪರದಾಡಿ ಹೋಗಿದ್ದಾರೆ. ಇನ್ನೂ ಗಾಳಿ ಹೊಡೆತದಿಂದ ಮರಗಳು ರಸ್ತೆಗೆ ಉರುಳಿದೆ. ಇದರಿಂದ ನಗರದೆಲ್ಲೆಡೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜೋರು ಮಳೆ ಹಿನ್ನೆಲೆ ಜನರೆಲ್ಲ ಫ್ಲೈಓವರ್ ಕೆಳಗೆ ಆಶ್ರಯ ಪಡೆದಿದ್ದರು. ಬೆಂಗಳೂರು ನಗರದ ವಿವಿಧೆಡೆ 32 ಮರಗಳು ಧರೆಗುರುಳಿವೆ. ಈ ಕುರಿತು ಬಿಬಿಎಂಪಿ ಕಂಟ್ರೋಲ್ ರೂಮ್ನಲ್ಲಿ 32 ದೂರು ದಾಖಲಾಗಿದೆ. ಕೂಡಲೇ 18 ಕಡೆ ಬಿಬಿಎಂಪಿ ಸಿಬ್ಬಂದಿ ಮರ ತೆರವು ಮಾಡಿದ್ದಾರೆ.