ಸೌದೆ ತರಲು ಹೋದ ವ್ಯಕ್ತಿ ಮೇಲೆ ರೈಲು‌ ಹರಿದು ಸಾವು

ಸಮಗ್ರ ನ್ಯೂಸ್: ರೈಲು‌ ಹರಿದು ಕಾರ್ಮಿಕ‌ನೊಬ್ಬ ಸಾವನ್ನಪ್ಪಿದ ಘಟನೆ ಶಿವಮೊಗ್ಗದ ವಿದ್ಯಾನಗರದ ಬಳಿ ನಡೆದಿದೆ.

Ad Widget ... ..

ರುದ್ರಪ್ಪ (68) ಮೃತ ದುರ್ದೈವಿ. ಇವರು ರೈಲ್ವೆ ಹಳಿಯ ಬಳಿ ಸೌದೆ ಆರಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಮೈಸೂರು ತಾಳಗುಪ್ಪ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಇನ್ನು ರುದ್ರಪ್ಪ, ಸ್ವಲ್ಪ ಕಿವುಡು ಹಾಗೂ ಕಣ್ಣು ಮಂಜಿನಿಂದ ಬಳಲುತ್ತಿದ್ದನಂತೆ. ಹೀಗಾಗಿ ರೈಲು ಬಂದ ಶಬ್ದ ಕೇಳಿಸದೇ ದುರ್ಘಟನೆ ಸಂಭವಿಸಿದ್ದು, ಈ ಕುರಿತು ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget

Leave a Comment

Your email address will not be published. Required fields are marked *