Ad Widget .

ಗುಡ್ ನ್ಯೂಸ್ ಕೊಟ್ಟ ಲಕ್ಷ್ಮೀ ಬಾರಮ್ಮ ಗೊಂಬೆ| ಮಗುವಿನ ನಿರೀಕ್ಷೆಯಲ್ಲಿ ನೇಹಾ-ಚಂದನ್‌ ಜೋಡಿ

ಸಮಗ್ರ ನ್ಯೂಸ್: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಗೊಂಬೆ ಪಾತ್ರದಲ್ಲಿ ಅಭಿನಯಿಸಿದವರು ನೇಹಾ ಗೌಡ ಕಿರುತೆರೆಯ ಗೊಂಬೆ ಎಂದೇ ಜನಪ್ರಿಯತೆ ಪಡೆದಿದ್ದರು. ನೇಹಾ ಪತಿ ಚಂದನ್ ಗೌಡ ಕೂಡ ಸದ್ಯ ಅಂತರಪಟ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಇನ್ನು ರಾಜ-ರಾಣಿ ಸೀಜನ್‌-1 ಶೋನಲ್ಲಿ ಭಾಗವಹಿಸಿದ್ದ ಈ ದಂಪತಿ ವಿನ್ನರ್‌ ಆಗಿ ಹೊರಹೊಮ್ಮಿದ್ದರು. ಈಗ ಈ ದಂಪತಿ ಗುಡ್ ನ್ಯೂಸ್ ನೀಡಿದ್ದಾರೆ.

Ad Widget . Ad Widget .

ಹೌದು ನಟಿ ನೇಹಾ ಗೌಡ ಹಾಗೂ ಚಂದನ್ ಗೌಡ ದಂಪತಿ ಇದೀಗ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗರ್ಭಿಣಿ ಆಗಿರುವ ನೇಹಾ ಗೌಡ ಈ ಖುಷಿಯ ವಿಷಯವನ್ನು ತಮ್ಮ ಅಭಿಮಾನಿಗಳೊಂದಿಗೆ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 6 ವರ್ಷಗಳ ಬಳಿಕ ನೇಹಾ ಗೌಡ ಹಾಗೂ ಚಂದನ್ ಸಿಹಿ ಸುದ್ದಿ ನೀಡಿದ್ದಾರೆ. ಇವರಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾ ಪೂರವೇ ಹರಿದು ಬಂದಿದೆ.

Ad Widget . Ad Widget .

Leave a Comment

Your email address will not be published. Required fields are marked *