Ad Widget .

ಬಿಸಿಲಿನ ತಾಪಕ್ಕೆ ಉತ್ತರ ಭಾರತ ತತ್ತರ… ಬಿಹಾರದಲ್ಲಿ 14 ಜನ ಸಾವು

ಸಮಗ್ರ ನ್ಯೂಸ್: ದೇಶದೆಲ್ಲೆಡೆ ಬಿಸಿಲಿನ ತಾಪ ಹೆಚ್ಚಾಗಿದು, ಉತ್ತರ ಭಾರತದ ವಿವಿಧ ಭಾಗದಲ್ಲಿ ಬಿಸಿಗಾಳಿ ಬೀಸುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಬಿಹಾರದಲ್ಲಿ ಬಿಸಿಗಾಳಿಯ ಶಾಖಕ್ಕೆ 24 ಗಂಟೆಗಳಲ್ಲಿ 10 ಮತಗಟ್ಟೆ ಸಿಬ್ಬಂದಿ ಸೇರಿ ಸುಮಾರು 14 ಮಂದಿ ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.

Ad Widget . Ad Widget .

ವಿಪತ್ತು ನಿರ್ವಹಣಾ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ಹೆಚ್ಚಿನ ಸಾವು ನೋವು ಭೋಜ್‌ಪುರದಲ್ಲಿ ನಡೆದಿದ್ದು, ಅಲ್ಲಿ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ 5 ಮಂದಿ ಮೃತಪಟ್ಟಿದ್ದಾರೆ. ರೋಹ್ಟಾಸ್‌ನಲ್ಲಿ ಮೂವರು ಚುನಾವಣಾ ಅಧಿಕಾರಿಗಳು, ಕೈಮೂರ್ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಜೀವ ಕಳೆದುಕೊಂಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

Ad Widget . Ad Widget .

ಮೃತ ಕುಟುಂಬಕ್ಕೆ ಪರಿಹಾರ ನೀಡಲು ಮನವಿ ಮಾಡಿದ್ದಾರೆ. ಇನ್ನೂ ಗಾಳಿ ವ್ಯಾಪಕವಾಗಿ ಬೀಸುತ್ತಿರುವ ಪರಿಣಾಮ ಎಲ್ಲ ಶಾಲೆಗಳು, ಕೋಚಿಂಗ್‌ ಸೆಂಟರ್‌ಗಳು ಮತ್ತು ಅಂಗನವಾಡಿಗಳಿಗೆ ಜೂನ್‌ 8ರ ತನಕ ರಜೆ ಘೋಷಿಸಲಾಗಿದೆ.

Leave a Comment

Your email address will not be published. Required fields are marked *