Ad Widget .

ದಾಖಲೆ ನಿರ್ಮಿಸಿದ ಮೋದಿ ಚುನಾವಣಾ ಪ್ರಚಾರ/ 206 ಪ್ರಚಾರ ಸಭೆ, 80 ಸಂದರ್ಶನಗಳಲ್ಲಿ ಪಾಲ್ಗೊಂಡ ಪ್ರಧಾನಿ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆಗಾಗಿ 206 ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡುವುದರ ಜೊತೆಗೆ, ಪತ್ರಕರ್ತರೊಂದಿಗೆ 80 ಸಂದರ್ಶನಗಳಲ್ಲಿ ಭಾಗಿಯಾಗುವುದರ ಮೂಲಕ ದಾಖಲೆ ನಿರ್ಮಿಸಿದ್ದಾರೆ. 2024ರ ಲೋಕಸಭಾ ಚುನಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‍ನ ಹೋಶಿಯಾರ್‍ಪುರದಲ್ಲಿ ತಮ್ಮ ಕೊನೆಯ ಪ್ರಚಾರ ಸಭೆಯನ್ನು ನಡೆಸಿದ ನಂತರ ಧ್ಯಾನ ಮಾಡಲು ಕನ್ಯಾಕುಮಾರಿಗೆ ತೆರಳಿದ್ದಾರೆ.

Ad Widget . Ad Widget .

ನರೇಂದ್ರ ಮೋದಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಚುನಾವಣಾ ಪ್ರಚಾರದ ಉಸ್ತುವಾರಿ ವಹಿಸಿದ್ದು, ಒಂದೇ ದಿನದಲ್ಲಿ ಹಲವು ಸಭೆಗಳನ್ನು ಉದ್ದೇಶಿಸಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನ ಸಾಮಾನ್ಯರಿಗೆ ತಿಳಿಸಿದ್ದರು. ಪ್ರಧಾನಮಂತ್ರಿಯವರು ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದ ಮೇಲೆ ಹೆಚ್ಚಾಗಿ ಗಮನಹರಿಸಿದ್ದಾರೆ. ಅಲ್ಲಿ ಅವರು ಕ್ರಮವಾಗಿ 31, 20, 19 ಮತ್ತು 18 ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

Ad Widget . Ad Widget .

ಪ್ರಧಾನಿ ನರೇಂದ್ರ ಮೋದಿ ಈ 10 ವರ್ಷಗಳಲ್ಲಿ ಪತ್ರಕರ್ತರೊಂದಿಗೆ ಹೆಚ್ಚು ಮುಖಾಮುಖಿಯಾಗಿಲ್ಲ ಎಂಬ ಆರೋಪವಿತ್ತು. ಆದರೆ, ಈ ಬಾರಿ ಪ್ರಧಾನಿ ಮೋದಿ ಅವರು 80 ಸಂದರ್ಶನಗಳನ್ನು ನೀಡಿದ್ದಾರೆ.

Leave a Comment

Your email address will not be published. Required fields are marked *