ಸಮಗ್ರ ನ್ಯೂಸ್: ಪ್ರಜ್ವಲ್ ಭಾರತಕ್ಕೆ ಬಂದಾಯ್ತು..ಈ ಪೆನ್ ಡ್ರೈವ್ ಪ್ರಕರಣ ಮತ್ತು ಲೋಕ ಚುನಾವಣೆಯಿಂದ ಬ್ರೇಕ್ ಪಡೆಯಲು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕುಟುಂಬದ ಜೊತೆ ಜಾಲಿ ಟ್ರಿಪ್ ಕೈಗೊಂಡಿದ್ದಾರೆ. ಕಬಿನಿ ಹಿನ್ನೀರಿನಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದು, ಕುಟುಂಬದವರನ್ನು ಬಿಟ್ಟು ಯಾರನ್ನು ನಾನು ಭೇಟಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಆದರೆ ಚುನಾವಣೆ ಫಲಿತಾಂಶ ಮೊದಲೇ ಬೆಂಗಳೂರಿಗೆ ಬರಲು ತೀರ್ಮಾನ ಮಾಡಿದ್ದಾರೆ. ಇನ್ನೂ ಪ್ರಜ್ವಲ್ ಬಂಧನದ ಹಿನ್ನೆಲೆ ಕುಮಾರಸ್ವಾಮಿ ಜಾಲಿ ಟ್ರಿಪ್ ಹೋಗಿರೋದ್ರಿಂದ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಎಚ್.ಡಿ. ಕುಮಾರಸ್ವಾಮಿ ಅವರನ್ನು ಟೀಕಿಸಿದೆ.
“ಅತ್ಯಾಚಾರ ಆರೋಪಿ ಭಾರತಕ್ಕೆ ಮರಳುವ ಸೂಚನೆ ಸಿಗುತ್ತಿದ್ದಂತೆಯೇ ಬ್ರದರ್ ಸ್ವಾಮಿಗಳು ಫ್ಯಾಮಿಲಿ ಸಮೇತ ಟ್ರಿಪ್ ಹೋಗಿದ್ದಾರೆ.
ಈ ಸಂದರ್ಭದಲ್ಲಿ ಜಾಲಿ ಟ್ರಿಪ್ ಗೆ ಹೋಗಿದ್ದು
ಪ್ರಕರಣದ ಕುರಿತು ಎದುರಾಗುವ ಪ್ರಶ್ನೆಗಳಿಗೆ ಉತ್ತರಿಸಲಾಗದ ಹೇಡಿತನವೊ ಅಥವಾ ರೇವಣ್ಣ ಕುಟುಂಬಕ್ಕೂ ನನಗೂ ಸಂಬಂಧವಿಲ್ಲ ಎಂದು ಸಂದೇಶ ನೀಡುವುದಕ್ಕೋ?
ಪ್ರಜ್ವಲ್ ಪ್ರಕರಣದಲ್ಲಿ ಬ್ರದರ್ ಸ್ವಾಮಿಗಳು ಇದುವರೆಗೂ ಒಮ್ಮೆಯೂ ಹೊಣೆಗಾರಿಕೆಯಿಂದ ವರ್ತಿಸಿದ ಉದಾಹರಣೆ ಇಲ್ಲ.
ತಮ್ಮದೇ ಪಕ್ಷದ, ತಮ್ಮದೇ ಕುಟುಂಬದ ವ್ಯಕ್ತಿಯೊಬ್ಬನಿಂದ ಇಡೀ ರಾಜ್ಯವೇ ತಲೆತಗ್ಗಿಸುವ ಕೆಲಸ ನಡೆದಿದ್ದರೂ ಬ್ರದರ್ ಸ್ವಾಮಿಗಳಿಗೆ ಕಿಂಚಿತ್ ಪಶ್ಚಾತ್ತಾಪವಿಲ್ಲದೆ ಜಾಲಿ ಟ್ರಿಪ್ ಹೊಡೆಯುತ್ತಿರುವುದು ನಾಚಿಕೆಗೇಡು”. ಎಂದು ಕಾಂಗ್ರೆಸ್ ಟೀಕಿಸಿದೆ.