ಎಸ್ ಡಿಪಿಐ ಕಡಬ ಬ್ಲಾಕ್ ಸಮಿತಿ ವತಿಯಿಂದ ಕಾರ್ಯಕರ್ತರ ಸಮಾವೇಶ

ಸಮಗ್ರ ನ್ಯೂಸ್: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕಡಬ ಬ್ಲಾಕ್ ಸಮಿತಿಯ ವತಿಯಿಂದ ಕಾರ್ಯಕರ್ತರ ಸಮಾವೇಶವು ಮೇ 31ರಂದು
ನೆಲ್ಯಾಡಿಯಲ್ಲಿ ಕಡಬ ಬ್ಲಾಕ್ ಸಮಿತಿಯ ಅಧ್ಯಕ್ಷ ಹಾರಿಸ್ ಕಡಬ ರವರು ಅಧ್ಯಕ್ಷತೆಯಲ್ಲಿ ನಡೆಯಿತು.

Ad Widget ... ..

ಪ್ರಾಸ್ತಾವಿಕವಾಗಿ ಮಾತನಾಡಿದ ಸುಳ್ಯ ವಿಧಾನಸಭಾ ಕ್ಷೇತ್ರ ಪಕ್ಷ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಸವಣೂರು ರವರು ಮಾತನಾಡಿ ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿದರು. ಸಮಾವೇಶದ ಸಮಾರೋಪ ಭಾಷಣ ಗೈದ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಶರೀಫ್ ನಿಂತಿಕಲ್ ರವರು ಜೂನ್ 21 ರಂದು ಕ್ಷೇತ್ರದಾದ್ಯಂತ ಸಭೆ ನಡೆಸಲು ಉದ್ದೇಶಿಸಿದ ಪಕ್ಷದ ಸಂಸ್ಥಾಪನಾ ದಿನಾಚರಣೆಯನ್ನು ಶಿಸ್ತುಬದ್ಧವಾಗಿ ಸಾಮಾಜಿಕ ಕಳಕಳಿಯೊಂದಿಗೆ ನಡೆಸಲು ಕಾರ್ಯಕರ್ತರಿಗೆ ಕರೆ ಕೊಟ್ಟರು.

Ad Widget

ಸಮಾವೇಶದ ವೇದಿಕೆಯಲ್ಲಿ ಕಡಬ ಬ್ಲಾಕ್ ನ ಕೋಶಾಧಿಕಾರಿ ಅಬ್ಬಾಸ್ ಕಳಾರ, ಬ್ಲಾಕ್ ಉಪಾಧ್ಯಕ್ಷ ರಜಾಕ್ ಕೋಲ್ಪೇ ಉಪಸ್ಥಿತರಿದ್ದರು. ಸಿದ್ದೀಕ್ ಮನಗುಂಡಿ ಸ್ವಾಗತಿಸಿ, ಸಿದ್ದೀಕ್ ನೆಲ್ಯಾಡಿ ಧನ್ಯವಾದಗೈದರು.

Leave a Comment

Your email address will not be published. Required fields are marked *