May 2024

ಬೋರ್‌ವೆಲ್ ಕೊರೆಯುತ್ತಿದ್ದ ಲಾರಿ ಮೇಲೆ ಕಲ್ಲು ತೂರಾಟ| ಸಣ್ಣ ಮಕ್ಕಳು ಭಾಗಿ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುರುಷರಕಟ್ಟೆ ಎಂಬಲ್ಲಿ ಬೋರ್‌ವೆಲ್ ಕೊರೆಯುತ್ತಿದ್ದ ಲಾರಿ ಮೇಲೆ ಕಲ್ಲು ತೂರಾಟ ನಡೆದಿದೆ . ಪ್ರಸಿದ್ಧ ಬಿಂದು ನೀರಿನ ಫ್ಯಾಕ್ಟರಿ ಪುರುಷರಕಟ್ಟೆ ಎಂಬಲ್ಲಿ ಕಾರ್ಯಾಚರಿಸುತ್ತಿದ್ದು ಈ ಫ್ಯಾಕ್ಟರಿಗೆ ಸೇರಿದ ಬೋರ್‌ವೆಲ್‌ಗಳನ್ನು ಫ್ಲಶ್ ಮಾಡುತ್ತಿದ್ದ ಸಂದರ್ಭದಲ್ಲಿ ಅನ್ಯಕೋಮಿನ ಸಂಘಟನೆಗೆ ಸೇರಿದ ಗುಂಪಿನಿಂದ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ. ಕಲ್ಲು ತೂರಾಟದಲ್ಲಿ ಸಣ್ಣ ಮಕ್ಕಳು ಕೂಡ ಭಾಗಿಯಾಗಿರುವುದು ಕೇಳಿ ಬಂದಿದೆ. ಸದ್ಯ ಎರಡೂ ಗುಂಪುಗಳಿಂದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ […]

ಬೋರ್‌ವೆಲ್ ಕೊರೆಯುತ್ತಿದ್ದ ಲಾರಿ ಮೇಲೆ ಕಲ್ಲು ತೂರಾಟ| ಸಣ್ಣ ಮಕ್ಕಳು ಭಾಗಿ Read More »

ಬಸ್ ಟಿಕೆಟ್ ನಲ್ಲಿ 4 ರೂಪಾಯಿ ಹೆಚ್ಚಳ/ ಸಾರಿಗೆ ಇಲಾಖೆಗೆ 8004 ರೂ ದಂಡ

ಸಮಗ್ರ ನ್ಯೂಸ್: ಮೈಸೂರಿನಿಂದ ಮಡಿಕೇರಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಂದ ನಿಗದಿತ ದರಕ್ಕಿಂತ 4ರು. ಹೆಚ್ಚು ಪಡೆದಿರುವುದಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವಿಚಾರಣಾ ಆಯೋಗ ಮೈಸೂರು ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿಗೆ 8004 ರು. ದಂಡ ವಿಧಿಸಿ ತೀರ್ಪು ನೀಡಿದೆ. ಪ್ರಯಾಣಿಕರೊಬ್ಬರಿಂದ 11 ಜನವರಿ2023 ರಂದು ಮೈಸೂರಿನಿಂದ ಮಡಿಕೇರಿಗೆ ತೆರಳುವ ವೇಳೆ ಸಾರಿಗೆ ಬಸ್ ನಿರ್ವಾಹಕ 140 ರು. ಪಡೆದಿದ್ದರು. ಮತ್ತೆ ಮಡಿಕೇರಿಯಿಂದ ಮೈಸೂರಿಗೆ ಪ್ರಯಾಣಿಸುವಾಗ ಮತ್ತೊಂದು ಬಸ್‍ನ ನಿರ್ವಾಹಕ 136 ರು. ಪಡೆದಿದ್ದರು. ಇದರ ವಿರುದ್ಧ ಮಂಡ್ಯ ಜಿಲ್ಲಾ ಗ್ರಾಹಕರ

ಬಸ್ ಟಿಕೆಟ್ ನಲ್ಲಿ 4 ರೂಪಾಯಿ ಹೆಚ್ಚಳ/ ಸಾರಿಗೆ ಇಲಾಖೆಗೆ 8004 ರೂ ದಂಡ Read More »

ಧ್ವನಿ ಸಂದೇಶದ ಅವಧಿ ಹೆಚ್ಚಿಸಿದ ವಾಟ್ಸಾಪ್/ ಇನ್ಮುಂದೆ ಕಳುಹಿಸಬಹುದು ಒಂದು ನಿಮಿಷದ ಧ್ವನಿ ಸಂದೇಶ

ಸಮಗ್ರ ನ್ಯೂಸ್: ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಸಾಕಷ್ಟು ಹೊಸತನಗಳನ್ನು ಅಳವಡಿಸಿಕೊಳ್ಳುತ್ತಿದ್ದು, ಇದೀಗ ಧ್ವನಿ ಸಂದೇಶಗಳ ಕಾಲಾವಧಿಯನ್ನು ಹೆಚ್ಚಿಸಿ ಹೊಸ ಅಪ್‍ಡೇಟ್ ನೀಡಿದೆ. ವಾಟ್ಸ್ ಆಪ್ ಆವೃತ್ತಿಯು ಬಳಕೆದಾರರಿಗೆ ಪ್ರಸ್ತುತ ಕೇವಲ 30 ಸೆಕೆಂಡ್ ಗಳಷ್ಟು ಅವಧಿಯ ಧ್ವನಿ ಸಂದೇಶಗಳನ್ನು ಹಂಚಿಕೊಳ್ಳಲು ಮಾತ್ರ ಅನುಮತಿ ನೀಡುತ್ತಿತ್ತು. ಆದರೆ ಇನ್ನು ಮುಂದೆ ಸುಮಾರು ಒಂದು ನಿಮಿಷಗಳ ಕಾಲದ ಧ್ವನಿ ಸಂದೇಶವನ್ನು ವಾಟ್ಸಾಪ್ ಮೂಲಕ ಕಳುಹಿಸಬಹುದು. ಒಂದು ನಿಮಿಷದವರೆಗೆ ಧ್ವನಿ ಸಂದೇಶಗಳನ್ನು ಕಳುಹಿಸುವ ವಿಧಾನವನ್ನು ಬೆಂಬಲಿಸಲು

ಧ್ವನಿ ಸಂದೇಶದ ಅವಧಿ ಹೆಚ್ಚಿಸಿದ ವಾಟ್ಸಾಪ್/ ಇನ್ಮುಂದೆ ಕಳುಹಿಸಬಹುದು ಒಂದು ನಿಮಿಷದ ಧ್ವನಿ ಸಂದೇಶ Read More »

ಟೀಮ್ ಇಂಡಿಯಾಕ್ಕೆ ನೂತನ ಕೋಚ್/ ಅರ್ಜಿ ಸಲ್ಲಿಸಿದ ಮೋದಿ, ಅಮಿತಾ ಷಾ

ಸಮಗ್ರ ನ್ಯೂಸ್: ಭಾರತೀಯ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಸೂಕ್ತ ವ್ಯಕ್ತಿಯ ಹುಡುಕಾಟ ನಡೆಯುತ್ತಿರುವ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಚಿನ್ ತೆಂಡೂಲ್ಕರ್, ಎಂ.ಎಸ್ ಧೋನಿ, ಅಮಿತ್ ಶಾ ಸೇರಿ ಹಲವು ಪ್ರಮುಖರು ಅರ್ಜಿ ಸಲ್ಲಿದ್ದಾರೆ. ಆದ್ರೆ ಅಸಲಿಗೆ ಇವರಾರು ಈ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ. ಬದಲಾಗಿ ನೆಟ್ಟಿಗರು ಇವರ ಹೆಸರಿನಲ್ಲಿ ನಕಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಲು ಮೇ 27 ಅಂತಿಮ ದಿನವಾಗಿದ್ದು, ಇದಕ್ಕೂ ಮುನ್ನ ಅನೇಕ ಕ್ರಿಕೆಟ್ ಅಭಿಮಾನಿಗಳು ಅರ್ಜಿ ಪಡೆದುಕೊಂಡು ಕೋಚ್ ಹುದ್ದೆಗೆ

ಟೀಮ್ ಇಂಡಿಯಾಕ್ಕೆ ನೂತನ ಕೋಚ್/ ಅರ್ಜಿ ಸಲ್ಲಿಸಿದ ಮೋದಿ, ಅಮಿತಾ ಷಾ Read More »

ಮಂಗಳೂರು: ರಸ್ತೆ ಮಧ್ಯೆ ನಮಾಜ್ ಮಾಡಿದ ಪ್ರಕರಣ| ಸುಮೋಟೋ‌ ಕೇಸ್ ದಾಖಲು

ಸಮಗ್ರ ನ್ಯೂಸ್: ಮಂಗಳೂರು ನಗರದ ಕಂಕನಾಡಿಯ ಮಸೀದಿಯೊಂದರ ಮುಂಭಾಗದ ರಸ್ತೆಯಲ್ಲಿ ಮೇ 24ರಂದು ನಮಾಝ್ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸುಮೊಟೊ‌ ಕೇಸ್ ದಾಖಲಿಸಲಾಗಿದೆ. ಈ ವೀಡಿಯೋ ಪರಿಶೀಲಿಸಲಾಗಿದ್ದು, ಸಾರ್ವಜನಿಕರಿಗೆ ಓಡಾಡಲು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡೆತಡೆಯನ್ನುಂಟು ಮಾಡಿದ ವ್ಯಕ್ತಿಗಳ ಮೇಲೆ ಸ್ವಯಂಪ್ರೇರಿತ (ಸುಮೊಟೊ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಮಂಗಳೂರು: ರಸ್ತೆ ಮಧ್ಯೆ ನಮಾಜ್ ಮಾಡಿದ ಪ್ರಕರಣ| ಸುಮೋಟೋ‌ ಕೇಸ್ ದಾಖಲು Read More »

‘ತುಳುನಾಡು ಕರುನಾಡಲ್ಲೇ ಇದೆ, ನಮ್ಮನ್ನು ಹೊರಗಿನವರಂತೆ ಕಾಣಬೇಡಿ’| ಮಂಗಳೂರಿನಲ್ಲಿ ಕಿಚ್ಚ ಸುದೀಪ್ ಹೇಳಿಕೆ

ಸಮಗ್ರ ನ್ಯೂಸ್: ‘ಎಲ್ಲರಿಗೂ ನಮಸ್ಕಾರ. ವೇದಿಕೆ ಮೇಲಿದ್ದವರು ನಮ್ಮ ತುಳುನಾಡಿಗೆ ನಮ್ಮ ತುಳುನಾಡಿಗೆ ಎಂದು ನಮ್ಮನ್ನು ಹೊರಗಿನವರನ್ನಾಗಿ ಮಾಡುತ್ತಿದ್ದಾರೆ. ತುಳುನಾಡು ಕರ್ನಾಕಟದಲ್ಲೇ ಇದೆ’ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ. ಅವರು ಮಂಗಳೂರಿನಲ್ಲಿ ‘ಯಕ್ಷ ಧ್ರುವ ಪಟ್ಲ ಫೌಂಡೇಶನ್​’ ಆಯೋಜಿಸಿದ್ದ ‘ಯಕ್ಷ ಧ್ರುವ ಪಟ್ಲ ಸಂಭ್ರಮ 2024’ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ‘ಕರ್ನಾಟಕ ನಮ್ಮ ಹೃದಯದಲ್ಲಿದೆ. ನಾವು ಅರ್ಧ ಈಕಡೆಯವರು ಎಂದು ನಿರೂಪಕರು ಹೇಳಿದರು. ಪ್ರತಿ ಬಾರಿ ಇಲ್ಲಿಗೆ ಕರೆದಾಗ ಬಹಳ ಖುಷಿ ಆಗುತ್ತದೆ. ಈ ಊರಿನ

‘ತುಳುನಾಡು ಕರುನಾಡಲ್ಲೇ ಇದೆ, ನಮ್ಮನ್ನು ಹೊರಗಿನವರಂತೆ ಕಾಣಬೇಡಿ’| ಮಂಗಳೂರಿನಲ್ಲಿ ಕಿಚ್ಚ ಸುದೀಪ್ ಹೇಳಿಕೆ Read More »

ಕುಕ್ಕೆ ಸುಬ್ರಹ್ಮಣ್ಯ: ರಾಜ್ಯದ ಶ್ರೀಮಂತ ದೇವಸ್ಥಾನದಲ್ಲಿ ಇದೆಂತಾ ಅ(ವ್ಯ)ವಸ್ಥೆ| ಬೀದಿಯಲ್ಲೇ ಮಲಗಿದ ಭಕ್ತಾಧಿಗಳು

ಸಮಗ್ರ ನ್ಯೂಸ್: ಬೇಸಿಗೆ ರಜೆ ಮತ್ತು‌ ‘ಶಕ್ತಿ’ ಯೋಜನೆಯಿಂದಾಗಿ ರಾಜ್ಯದ ಪ್ರಸಿದ್ಧ ಯಾತ್ರಾಕ್ಷೇತ್ರಗಳು ತುಂಬಿ ತುಳುಕುತ್ತಿದ್ದು, ಕರಾವಳಿಯ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಉಡುಪಿ ಸೇರಿದಂತೆ ಪ್ರಸಿದ್ಧ ದೇವಸ್ಥಾನಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ರಾಜ್ಯದ ನಂ. ೧ ಮುಜುರಾಯಿ ದೇವಸ್ಥಾನ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಕಳೆದ ಕೆಲ ದಿನಗಳಿಂದ ಭಕ್ತರ ದಂಡೇ ಕಂಡುಬರುತ್ತಿದ್ದು, ಮೂಲ ಸೌಕರ್ಯ ನೀಡಲು ದೇವಸ್ಥಾನದ ಆಡಳಿತ ಮಂಡಳಿ ಹರಸಾಹಸ ಪಡುತ್ತಿದೆ. ಶಕ್ತಿ ಯೋಜನೆ ಪರಿಣಾಮ ಮಹಿಳಾ ಭಕ್ತರ‌ ದಂಡು ಕುಕ್ಕೆ ಕ್ಷೇತ್ರದತ್ತ ಹರಿದು ಬರುತ್ತಿದ್ದು,

ಕುಕ್ಕೆ ಸುಬ್ರಹ್ಮಣ್ಯ: ರಾಜ್ಯದ ಶ್ರೀಮಂತ ದೇವಸ್ಥಾನದಲ್ಲಿ ಇದೆಂತಾ ಅ(ವ್ಯ)ವಸ್ಥೆ| ಬೀದಿಯಲ್ಲೇ ಮಲಗಿದ ಭಕ್ತಾಧಿಗಳು Read More »

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ವಿರುದ್ದ ಎರಡು ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಕೆ

ಸಮಗ್ರ ನ್ಯೂಸ್: ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿದ್ದನ್ನು ವಿರೋಧಿಸಿ ಪೊಲೀಸರ ವಿರುದ್ಧವೇ ಗುಡುಗಿದ್ದ ಶಾಸಕ ಹರೀಶ್ ಪೂಂಜ ವಿರುದ್ಧ ದಾಖಲಾಗಿದ್ದ ಎರಡೂ ಪ್ರಕರಣಗಳ ತ್ವರಿತ ತನಿಖೆ ನಡೆಸಿದ ಪೊಲೀಸರು ಶಾಸಕರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಮೇ.28. ರಂದು ದೋಷಾರೋಪಣಾ ಪಟ್ಟಿ (ಚಾರ್ಜ್ ಶೀಟ್ ) ಸಲ್ಲಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಎಸ್.ಪಿ ಅವರಿಂದ ನಿಯೋಜಿಸಲ್ಪಟ್ಟಿದ್ದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದ ಪುತ್ತೂರು ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್ ಜಿ.ಜೆ‌ ಅವರು ಬೆಂಗಳೂರಿನ ನ್ಯಾಯಾಲಯಕ್ಕೆ ಈ ಆರೋಪ ಪಟ್ಟಿ

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ವಿರುದ್ದ ಎರಡು ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಕೆ Read More »

ಮೈಸೂರು: ವಿಜಯನಗರದ ಮಸಾಜ್ ಪಾರ್ಲರ್ ಮೇಲೆ ದಾಳಿ| ಮಡಿಕೇರಿ ಮೂಲದ ಓರ್ವ ಯುವತಿ ಸೇರಿದಂತೆ ನಾಲ್ವರು ಮಹಿಳೆಯರ ರಕ್ಷಣೆ

ಸಮಗ್ರ ನ್ಯೂಸ್: ಮೈಸೂರಿನ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂದೆ ನಡೆಸುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು ಮಡಿಕೇರಿಯ ಓರ್ವ ಯುವತಿ ಸೇರಿದಂತೆ ಐವರನ್ನು ರಕ್ಷಿಸಿದ ಘಟನೆ ನಡೆದಿದೆ. ವಿಜಯನಗರದಲ್ಲಿರುವ ಮಸಾಜ್ ಪಾರ್ಲರ್ ಮೇಲೆ ಪೊಲೀಸರು ದಾಳಿ ನಡೆಸಿದ್ದು ಈ ಪೈಕಿ ಇಬ್ಬರು ಪಶ್ಚಿಮ ಬಂಗಾಳದವರಾಗಿದ್ದು, ಓರ್ವ ಯುವತಿ ಮಡಿಕೇರಿಯ ಮೂಲದವಳು ಇನ್ನುಳಿದ ಇಬ್ಬರು ಸ್ಥಳೀಯರು ಎಂದು ತಿಳಿದು ಬಂದಿದೆ. ಈ ದಾಳಿಯಲ್ಲಿ ಓರ್ವ ದಂದೆ ಕೋರ ಮಹಿಳೆ ಒಬ್ಬ ಪಿಂಪ್

ಮೈಸೂರು: ವಿಜಯನಗರದ ಮಸಾಜ್ ಪಾರ್ಲರ್ ಮೇಲೆ ದಾಳಿ| ಮಡಿಕೇರಿ ಮೂಲದ ಓರ್ವ ಯುವತಿ ಸೇರಿದಂತೆ ನಾಲ್ವರು ಮಹಿಳೆಯರ ರಕ್ಷಣೆ Read More »

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ| ಮತ್ತಿಬ್ಬರು ಆರೋಪಿಗಳು ಎಸ್ಐಟಿ‌ ವಶಕ್ಕೆ

ಸಮಗ್ರ ನ್ಯೂಸ್: ನೂರಾರು ಮಹಿಳೆಯರೊಂದಿಗಿನ ಲೈಂಗಿಕ ಹಗರಣದಲ್ಲಿ ದೇಶ ಬಿಟ್ಟು ತಲೆಮರೆಸಿಕೊಂಡಿರುವ ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಹಂಚಿಕೆ ಪ್ರಕರಣದಲ್ಲಿ ಕೊನೆಗೂ ಇಬ್ಬರು ಪ್ರಮುಖ ಆರೋಪಿಗಳನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್ ಡ್ರೈವ್ ಹಂಚಿಕೆ ಆರೋಪದ ಮೇಲೆ ನವೀನ್ ಗೌಡ ಹಾಗು ಚೇತನ್ ಎಂಬ ಇಬ್ಬರನ್ನಿ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಈ ಇಬ್ಬರೂ ಹೈಕೋರ್ಟ್‌ಗೆ ಬಂದಿದ್ದ ವೇಳೆ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ| ಮತ್ತಿಬ್ಬರು ಆರೋಪಿಗಳು ಎಸ್ಐಟಿ‌ ವಶಕ್ಕೆ Read More »